ಕುಂಬಳೆ: ನಿಯಂತ್ರಣ ತಪ್ಪಿದ ಬೈಕ್ ತಡೆಗೋಡೆಯಿಲ್ಲದ ಸೇತುವೆ ಯಿಂದ ತೋಡಿಗೆ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕೊಯಿಪ್ಪಾಡಿ ದೇವಿನಗರ ಜಾನಕಿ ನಿವಾಸದ ಉಮೇಶ್ ಸಾಲಿಯಾನ್ ಎಂಬವರ ಪುತ್ರ ಸುಭಾಶ್ಚಂದ್ರಬೋಸ್ (42) ಮೃತಪಟ್ಟ ದುರ್ದೈವಿ. ಇವರು ಕಾಂಕ್ರೀಟ್ ಕಾರ್ಮಿಕನಾಗಿದ್ದರು. ನಿನ್ನೆ ರಾತ್ರಿ 10 ಗಂಟೆ ವೇಳೆ ಅಪಘಾತ ಸಂಭವಿಸಿದೆ. ಇವರು ಶೇಡಿಕಾವು ರಸ್ತೆ ಮೂಲಕ ಬೈಕ್‌ನಲ್ಲಿ ಕುಂಬಳೆ ಭಾಗಕ್ಕೆ ಪ್ರಯಾಣಿಸುತ್ತಿದ್ದರು. ನಂಬಿಕ್ಕರ ಎಂಬ ಲ್ಲಿನ ಇಳಿಜಾರು ಪ್ರದೇಶಕ್ಕೆ ತಲುಪಿದಾಗ ನಿಯಂತ್ರಣ ತಪ್ಪಿದ ಬೈಕ್ ತಡೆಗೋಡೆ ಯಿಲ್ಲದ ಸಂಕದಿಂದ ತೋಡಿಗೆ ಮಗುಚಿಬಿದ್ದಿತ್ತು. ಇದರಿಂದ ತಲೆಗೆ ಗಂಭೀರ ಗಾಯಗೊಂಡ ಸುಭಾಶ್ಚಂದ್ರ ಬೋಸ್‌ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾ ಗಿದೆ. ಅಪಘಾತ ಬಗ್ಗೆ ಕುಂಬಳೆ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮೃತರು ತಾಯಿ ಸುಶೀಲ, ಪತ್ನಿ ಸುಮತಿ, ಮಕ್ಕಳಾದ ಕೌಶಿಕ್, ಸನ್ವಿಶ, ಸಹೋದರ-ಸಹೋದರಿಯರಾದ ರತೀಶ್, ಜಯಶ್ರೀಲ, ಸುಹಾಸಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






