ಬೋವಿಕ್ಕಾನ: ಮನೆಯೊಳಗೆ ಬಿದ್ದ ಸ್ಥಿತಿಯಲ್ಲಿ ಯುವಕ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟ ಘಟನೆ ನಡೆದಿದೆ. ಇರಿಯಣ್ಣಿ ನಿವಾಸಿ ದಿ| ಮಹಾಲಿಂಗನ್ ಎಂಬವರ ಪುತ್ರ ಹರಿಹರನ್ ಪಿ (36) ಮೃತಪಟ್ಟ ಯುವಕನಾಗಿದ್ದಾನೆ. ಮನೆಯಲ್ಲಿ ಹರಿಹರನ್ ಹಾಗೂ ತಾಯಿ ಪದ್ಮಾವತಿ ವಾಸಿಸುತ್ತಿದ್ದರು. ನಿನ್ನೆ ತಾಯಿ ಪಯ್ಯನ್ನೂರಿನಲ್ಲಿರುವ ಪುತ್ರಿ ಹರಿಣಾಕ್ಷಿಯ ಮನೆಗೆ ತೆರಳಿದ್ದರು. ನಿನ್ನೆ ರಾತ್ರಿ ಹರಿಹರನ್ ಮಾತ್ರವೇ ಮನೆಯಲ್ಲಿದ್ದರು. ರಾತ್ರಿ 10 ಗಂಟೆ ವೇಳೆ ನೆರೆಮನೆ ನಿವಾಸಿ ಅಲ್ಲಿಗೆ ಹೋದಾಗ ಹರಿಹರನ್ ಕೊಠಡಿಯೊಳಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಇರಿಯಣ್ಣಿಯ ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ಸಾವು ಸಂಭವಿಸಿತ್ತೆನ್ನಲಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
