ಮುಳ್ಳೇರಿಯ: ಕೋವಿಡ್ ಕಾಲದಲ್ಲಿ ಗಲ್ಫ್ ಉದ್ಯೋಗ ಕಳೆದುಕೊಂಡು ಊರಿಗೆ ಬಂದಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನೆಟ್ಟಣಿಗೆ ಬಳಿಯ ಬೆಳೇರಿ ನಿವಾಸಿ ಬಿ. ವಿನೋದ್ ಕುಮಾರ್ (40) ಮೃತ ಯುವಕ. ಮೊನ್ನೆ ಸಂಜೆ ಮನೆ ಬಳಿಯಿರುವ ಹಳೆಯ ಮನೆಯೊಳಗೆ ಇವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಸಹೋದರ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಸುಧಾಮ ಮಣಿಯಾಣಿ- ದಿ| ರಾಜೀವಿ ದಂಪತಿ ಪುತ್ರನಾದ ಮೃತರು ಸಹೋದರರಾದ ವಸಂತ, ಬಾಲಕೃಷ್ಣ, ಸಹೋದರಿ ಚಂದ್ರಿಕ ಹಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.