ಪತ್ನಿಗೆ ವೀಡಿಯೋಕಾಲ್ ಮಾಡಿದ ಬೆನ್ನಲ್ಲೇ ಯುವಕ ನಾಪತ್ತೆ: ತನಿಖೆ ಆರಂಭ

ಕುಂಬಳೆ: ಪತ್ನಿಗೆ ವೀಡಿಯೋ ಕಾಲ್ ಮಾಡಿದ ಬಳಿಕ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಜತ್ತೂರುಪದವಿನಲ್ಲಿ ಫ್ಯಾಕ್ಟರಿಯೊಂ ದರ ನೌಕರನಾದ ರೋಹಿತ್ ಕುಮಾರ್ (26) ನಾಪತ್ತೆಯಾದ ವ್ಯಕ್ತಿ. ಉತ್ತರ ಪ್ರದೇಶ ನಿವಾಸಿಯಾದ ಇವರು ಮೂರು ತಿಂಗಳ ಹಿಂದೆ ಇಲ್ಲಿಗೆ ಬಂದು ಕೆಲಸ ಆರಂಭಿಸಿದ್ದರ. ಕಂಪೆನಿಯ ಅಧೀನದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ಬೆಳಿಗ್ಗೆ 7.30ರ ವೇಳೆ ಮನೆಯಿಂದ ಹೋದ ಬಳಿಕ ಇವರು ನಾಪತ್ತೆಯಾಗಿದ್ದಾರೆನ್ನಲಾಗಿದೆ. 8 ಗಂಟೆಗೆ ಊರಿನಲ್ಲಿರುವ ಪತ್ನಿಗೆ ವೀಡಿಯೋ ಕಾಲ್ ಮಾಡಿದ್ದು, ಅನಂತರ ಇವರ ಫೋನ್ ಸ್ವಿಚ್‌ಆಫ್ ಆದ ಸ್ಥಿತಿಯಲ್ಲಿದೆ. ಈ ಬಗ್ಗೆ ಫ್ಯಾಕ್ಟರಿ ಮಾಲಕ ಅಬ್ದುಲ್ ರಹ್ಮಾನ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರೋಹಿತ್ ಕುಮಾರ್ ಆನ್‌ಲೈನ್ ಗೇಮ್‌ನ ಚಟಕ್ಕೆ ಅಂಟಿಕೊಂಡಿದ್ದರೆಂದೂ ಭಾರೀ ಆರ್ಥಿಕ ಸಂಕಷ್ಟದಲ್ಲಿದ್ದರೆಂದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಸೂಚನೆಯಿದೆ.

You cannot copy contents of this page