ಯುವಕ ನಾಪತ್ತೆ

ಮಂಜೇಶ್ವರ: ಕುಂಜತ್ತೂರು ಪದವಿನಲ್ಲಿ ಕಾರ್ಯಾಚರಿ ಸುತ್ತಿರುವ ಕಾರ್ಖಾನೆಯೊಂದರ ನೌಕರ ಉತ್ತರಪ್ರದೇಶ ನಿವಾಸಿ ರೋಹಿತ್ ಕುಮಾರ್ (26) ನಾಪತ್ತೆಯಾದ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ. ಮೂರು ತಿಂಗಳ ಹಿಂದೆ ಕುಂಜತ್ತೂರಿಗೆ ಬಂದು ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಕಂಪೆನಿ ಅಧೀನದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಇವರು ವಾಸವಾಗಿದ್ದರು. ಈ ತಿಂಗಳ 10ರಂದು ಬೆಳಿಗ್ಗೆ 7.30ರ ವೇಳ ಮನೆಯಿಂದ ಹೋದ ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ  ಮಾಲಿಕ ಅಬ್ದುಲ್ ರಹಿಮಾನ್ ನೀಡಿದ ದೂರಿನಂತೆ ಮಂಜೇ ಶ್ವರ ಪೊಲೀಸರು ಕೇಸು ದಾಖ ಲಿಸಿ ತನಿಖೆ ನಡೆಸುತ್ತಿದ್ದಾರೆ.

You cannot copy contents of this page