ಅಂಗಡಿ ಕೆಲಸದ ಮಧ್ಯೆ ಔಷಧಿ ಖರೀದಿಗೆಂದು ತೆರಳಿದ ಯುವಕ ನಾಪತ್ತೆ

ಮಂಜೇಶ್ವರ: ಉಪ್ಪಳದ ಸೂಪರ್ ಮಾರ್ಟ್‌ನಲ್ಲಿ ಕಾರ್ಮಿಕನಾಗಿದ್ದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಮಂಗಲ್ಪಾಡಿ ಸೋಂಕಾಲು ನಿವಾಸಿ ಕೃಪೇಶ್ (22) ನಿನ್ನೆ ಬೆಳಿಗ್ಗೆಯಿಂದ ನಾಪತ್ತೆಯಾಗಿರುವುದಾಗಿ ತಂದೆ ಶಿವಾನಂದ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಬೆಳಿಗ್ಗೆ 10.30ಕ್ಕೆ ಸೂಪರ್ ಮಾರ್ಟ್‌ನಿಂದ ಔಷಧಿ ಅಂಗಡಿಗೆ ತೆರಳುವುದಾಗಿ ಹೇಳಿ ಹೋದ ಕೃಪೇಶ್ ಮತ್ತೆ ಮರಳಲಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.   ಮೊಬೈಲ್ ಫೋನ್ ಸ್ವಿಚ್‌ಆಫ್ ಆಗಿದೆ. ಮನೆಗೂ ಅಂಗಡಿಗೂ ಹಾಗೂ ಸಂಬಂಧಿಕರ ಮನೆಗೂ ತೆರಳದ ಹಿನ್ನೆಲೆಯಲ್ಲಿ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

You cannot copy contents of this page