ಅಡೂರು: ಕೆಲಸಕ್ಕೆಂದು ಮಹಾರಾಷ್ಟ್ರಕ್ಕೆ ಹೋದ ಯುವಕ ನಾಪತ್ತೆಯಾದ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ.
ಆದೂರು ಮಂಡೆಬೆಟ್ಟಿ ನಿವಾಸಿ ನಾರಾಯಣ ಎಂಬವರ ಪುತ್ರ ರಮೇಶ (22) ನಾಪತ್ತೆಯಾದ ಯುವಕ. ಈ ಬಗ್ಗೆ ಸಹೋದರಿ ಶ್ಯಾಮಲ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
2025 ಜನವರಿ 23ರಂದು ಮಧ್ಯಾಹ್ನ 1.30ಕ್ಕೆ ರಮೇಶ ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗು ವುದಾಗಿ ತಿಳಿಸಿ ಮನೆಯಿಂದ ತೆರಳಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಇತ್ತೀಚೆಗೆ ಇವರು ಮಂಗಳೂರಿಗೆ ತಲುಪಿರುವುದಾಗಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸಂಬಂಧಿಕರು ಅಲ್ಲಿಗೆ ತೆರಳಿದ್ದರು. ಆದರೆ ಸಂಬಂಧಿಕರು ಅಲ್ಲಿಗೆ ತಲುಪುವ ಮೊದಲೇ ರಮೇಶ ವಾಸಿಸುತ್ತಿದ್ದ ಹೋಟೆಲ್ ಕೊಠಡಿಯಿಂದ ಹೊರಕ್ಕೆ ಹೋಗಿರುವುದಾಗಿ ತಿಳಿದು ಬಂದಿದೆ. ಅನಂತರ ಯಾವುದೇ ಮಾಹಿತಿಗಳು ಲಭಿಸದುದರಿಂದ ಪೊಲೀಸರಿಗೆ ದೂರು ನೀ ಡಲಾಗಿದೆ.







