ಕಾಸರಗೋಡು: ಆರು ತಿಂಗಳ ಹಿಂದೆ ಶಸ್ತ್ರ ಚಿಕಿತ್ಸೆಗಾಗಿ ಅನಸ್ತೇಶಿಯ ಚುಚ್ಚುಮದ್ದು ನೀಡಿದ ಬಳಿಕ ಅರೆಪ್ರಜ್ಞಾವಸ್ಥೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ಮಂಗಳೂರು ವಿಮಾನ ಅಪಘಾತದಲ್ಲಿ ಮೃತಪಟ್ಟ ಉದುಮ ಕುಂಡಡ್ಕದ ಮಾಹಿನ್-ಬೀಫಾತಿಮ ದಂಪತಿಯ ಪುತ್ರ ಅಲ್ತಾಫ್ (31) ಮೃತಪಟ್ಟ ವ್ಯಕ್ತಿ. ಆರು ತಿಂಗಳ ಹಿಂದೆ ಗಲ್ಫ್‌ನಿಂದ ಇವರು ಊರಿಗೆ ಬಂದಿದ್ದರು. ಅನಂತರ ಅಪೆಂಡಿಸೈಟಿಸ್ ಬಾಧಿಸಿದ ಹಿನ್ನೆಲೆಯಲ್ಲಿ ಅಲ್ತಾಫ್ ಕಾಸರಗೋಡು ಪರಿಸರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ತಲುಪಿದ್ದರೆನ್ನಲಾಗಿದೆ. ಶಸ್ತ್ರಚಿಕಿತ್ಸೆಯ ಪೂರ್ವಭಾವಿಯಾಗಿ ಅವರಿಗೆ ಅನಸ್ತೇಶಿಯ ಚುಚ್ಚುಮದ್ದು ನೀಡಿದ್ದು ಬಳಿಕ ಅವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಇದರಿಂದ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆರು ತಿಂಗಳಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಅಲ್ತಾಫ್‌ಗೆ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ಪತ್ನಿ ನಜಿಲ, ಮಕ್ಕಳಾದ ಮರಿಯಂನಸ್ವಾ, ಹೆಲ್ಮಾ ನಸಿಯ, ಸಹೋದರ-ಸಹೋದರಿಯರಾದ ಇರ್ಷಾದ್ (ಅಧ್ಯಾಪಕ), ಹಸೀನ, ಶುಹೈಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







