ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಡಂಬಾರ್ನಲ್ಲಿ ಯುವ ಅಧ್ಯಾಪಿಕೆ ಹಾಗೂ ಪತಿ ವಿಷ ಸೇವಿಸಿ ಸಾವಿಗೀಡಾದ ದಾರುಣ ಘಟನೆ ನಡೆದಿದೆ.
ಕಡಂಬಾರು ಚೆಂಬುಪದವು ನಿವಾಸಿ ದಿ| ಪುಷ್ಪರಾಜ್ ಎಂಬವರ ಪುತ್ರ ಅಜಿತ್ (35), ಪತ್ನಿ ಶ್ವೇತ (28) ಎಂಬವರು ಮೃತಪಟ್ಟ ದಂಪತಿಯಾಗಿದ್ದಾರೆ. ಅಜಿತ್ ಪೈಂಟಿಂಗ್ ಕಾರ್ಮಿಕನಾಗಿದ್ದಾರೆ. ಶ್ವೇತ ವರ್ಕಾಡಿ ಬೇಕರಿ ಬಳಿಯ ಖಾಸಗಿ ಶಾಲೆಯೊಂದರ ಅಧ್ಯಾಪಿಕೆಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆ ಈ ದಂಪತಿ ವಿಷ ಸೇವಿಸಿದ್ದಾರೆಂದು ಅಂದಾಜಿಸಲಾಗಿದೆ.
ಮನೆಯಲ್ಲಿ ಅಜಿತ್, ಪತ್ನಿ ಶ್ವೇತ, ಮೂರರ ಹರೆಯದ ಗಂಡು ಮಗು ಹಾಗೂ ಅಜಿತ್ರ ತಾಯಿ ಎಂಬಿವರು ವಾಸಿಸುತ್ತಿದ್ದಾರೆ. ನಿನ್ನೆ ಅಜಿತ್ರ ತಾಯಿ ಕೆಲಸಕ್ಕೆ ತೆರಳಿದ್ದರು. ಅನಂತರ ಮಗುವನ್ನು ಅಜಿತ್ ಬಂದ್ಯೋಡಿನ ಸಹೋದರಿ ಮನೆಗೆ ತಲುಪಿಸಿ ತನಗೆ ಬೇರೆ ಕಡೆ ಹೋಗಲಿಕ್ಕಿದೆಯೆಂದೂ ಅದುವರೆಗೆ ಮಗುವನ್ನು ನೋಡಿP ಳ್ಳುವಂತೆ ತಿಳಿಸಿ ಅಲ್ಲಿಂದ ಮರಳಿದ್ದರೆನ್ನಲಾಗಿದೆ.
ಇದೇ ವೇಳೆ ಶ್ವೇತ ಶಾಲೆಯಿಂದ ಮನೆಗೆ ತಲುಪಿದ್ದರು. ಅನಂತರ ಈ ಇಬ್ಬರು ವಿಷ ಸೇವಿಸಿದ್ದಾರೆಂದು ಅಂದಾಜಿಸಲಾಗಿದೆ.
ಮಧ್ಯಾಹ್ನ ೨.೩೦ರ ವೇಳೆ ಅಜಿತ್ ಹಾಗೂ ಶ್ವೇತ ಮನೆಯ ಸಿಟೌಟ್ನಲ್ಲಿ ಬಿದ್ದಿರುವುದನ್ನು ಸ್ಥಳೀಯ ನಿವಾಸಿಗಳು ಕಂಡಿದ್ದಾರೆ. ಕೂಡಲೇ ಇತರರಿಗೆ ವಿಷಯ ತಿಳಿಸಿದ ಬಳಿಕ ಅವರನ್ನು ಹೊಸಂಗಡಿ ಆಸ್ಪತ್ರೆಗೆ ತಲುಪಿಸಿ ಅನಂತರ ದೇರಳಕಟ್ಟೆಯ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಜಿತ್ ನಿನ್ನೆ ರಾತ್ರಿ 12.20ಕ್ಕೆ, ಶ್ವೇತ ಇಂದು ಮುಂಜಾನೆ 5.30ಕ್ಕೆ ಮೃತಪಟ್ಟಿ ದ್ದಾರೆಂದು ತಿಳಿದುಬಂದಿದೆ.
ಅಜಿತ್ ಹಾಗೂ ಶ್ವೇತಾರ ಮದುವೆ 5 ವರ್ಷಗಳ ಹಿಂದೆ ನಡೆದಿತ್ತು. ದಂಪತಿ ಮಧ್ಯೆ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ ಆರ್ಥಿಕವಾಗಿ ಭಾರೀ ಸಮಸ್ಯೆ ಎದುರಿಸುತ್ತಿದ್ದರೆನ್ನಲಾಗಿದೆ. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯಿಸುತ್ತಿರುವುದಾಗಿ ಹೇ ಳಲಾಗುತ್ತಿದೆ. ಘಟನೆ ಬಗ್ಗೆ ಸಂಬಂಧಿಕರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತದೇಹ ಗಳನ್ನು ಇಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತ ಅಜಿತ್ ತಾಯಿ ಪ್ರಮಿಳ, ಪುತ್ರ ಯುವಿನ್, ಸಹೋದರಿ ಯರಾದ ಶ್ವೇತ,ಶ್ರುತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಕರ್ನಾಟಕದ ಬಂಟ್ವಾಳ ಪರಂಗಿಪೇಟೆ ನಿವಾಸಿ ದಿ| ಜಯಕರ ಎಂಬವರ ಪುತ್ರಿಯಾದ ಶ್ವೇತ ತಾಯಿ ರೋಹಿಣಿ, ಸಹೋದರಿ ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.