ಕಲ್ಲಿಕೋಟೆ: ಸಹಪಾಠಿಯ ಮನೆಗೆ ಅತಿಥಿಯಾಗಿ ಬಂದು ೩೬ ಪವನ್ ಚಿನ್ನಾಭರಣದೊಂದಿಗೆ ಪರಾರಿಯಾದ ಆಂಧ್ರ ನಿವಾಸಿಯಾದ ಯುವತಿ ಮುಂಬೈಯಲ್ಲಿ ಸೆರೆಗೀಡಾಗಿದ್ದಾಳೆ. ವಿಜಯವಾಡ ನಿವಾಸಿಯಾದ ತೊಟ್ಟಾಬಾನು ಸೌಜನ್ಯ (24) ಎಂಬಾಕೆಯನ್ನು ಫರೋಕ್ ಎಸ್‌ಪಿ ಎ.ಎಂ. ಸಿದ್ದಿಕ್ ನೇತೃತ್ವದ ತಂಡ ಹಾಗೂ ಬೇಪೂರ್ ಪೊಲೀಸರು ಸೇರಿ ಸೆರೆ ಹಿಡಿದಿದ್ದಾರೆ. ಸೆರೆಗೀಡಾದ ಸೌಜನ್ಯ ಬೇಪೂರ್ ನಿವಾಸಿಯಾದ ಗಾಯತ್ರಿಯ ಸಹಪಾಠಿಯಾ ಗಿದ್ದಾಳೆ. ಇವರು ಬೆಂಗಳೂರಿನ ಕಾಲೇಜೊಂದರಲ್ಲಿ ಒಂದೇ ತರಗತಿಯಲ್ಲಿ ಸ್ನಾತಕೋತ್ತರ ಕೋರ್ಸ್ ಕಲಿಯುತ್ತಿದ್ದರು. ಜುಲೈ 17ರಂದು ಸೌಜನ್ಯ ಬೇಪೂರಿನ ಗಾಯತ್ರಿಯ ಮನೆಗೆ ಬಂದಿದ್ದಳು. ಮೂರು ದಿನಗಳ ಕಾಲ ಅಲ್ಲಿ ತಂಗಿದ ಬಳಿಕ ಮರಳುವಾಗ ಯಾರಿಗೂ ತಿಳಿಯದೆ ಗಾಯತ್ರಿಯ ಮನೆಯಿಂದ ೩೬ ಪವನ್ ಚಿನ್ನವನ್ನು ಈಕೆ ಕಳವು ನಡೆಸಿದ್ದಾಳೆ. ಅನಂತರ ತನಗೆ ಗುಜರಾತ್‌ನ ಸೇನೆಯಲ್ಲಿ ಉದ್ಯೋಗ ಲಭಿಸಿದೆಯೆಂದೂ ಆದ್ದರಿಂದ ಕಾಲೇಜಿಗೆ ಬರುವುದಿಲ್ಲವೆಂದು ತಿಳಿಸಿದ್ದಳು. ಕಳವುಗೈದ ಚಿನ್ನವನ್ನು ಅಡವಿರಿಸಿ ಹಾಗೂ ಮಾರಾಟಗೈದು ಲಭಿಸಿದ ಹಣದೊಂದಿಗೆ ಸೌಜನ್ಯ ಟಾನ್ಸಾನಿಯದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದಳು. ಇದೇ ವೇಳೆ ಚಿನ್ನ ಕಳವಿಗೀಡಾದ ಬಗ್ಗೆ ಮನೆಯ ವರು ಬೇಪೂರು ಪೊಲೀಸರಿಗೆ ದೂರು ನೀಡಿದ್ದರು. ಸಹಪಾ ಠಿಯೇ ಈ ಕಳವು ನಡೆಸಿರುವುದಾಗಿ ಸಂಶಯ ವ್ಯಕ್ತಪಡಿಸ ಲಾಗಿತ್ತು. ಈಮಧ್ಯೆ ಇತ್ತೀಚೆಗೆ ಸೌಜನ್ಯ ಗುಜರಾತ್‌ಗೆ ಮರಳಿ ತಲುಪಿದ್ದಳು. ಅಲ್ಲಿ ಸಹೋದರಿಯೊಂದಿಗೆ ವಾಸಿಸುತ್ತಿದ್ದ್ದಾ ಳೆಂದು ಮಾಹಿತಿ ಲಭಿಸಿದ ಪೊಲೀಸರು ಅತ್ತ ತೆರಳಿದ್ದರು. ಆದರೆ ಅಷ್ಟರಲ್ಲಿ ಆಕೆ ಮುಂಬಯಿಗೆ ಪರಾರಿಯಾಗಿದ್ದಳು. ಇದರಿಂದ ಅತೀ ಸಾಹಸಿಕವಾಗಿ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು ಸೌಜನ್ಯಳನ್ನು ಸೆರೆಹಿಡಿದಿದ್ದಾರೆ.
