ಕಾಸರಗೋಡು: ಕೆಲಸ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದ ಯುವತಿ ಕುಸಿದುಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕುಂಬಳೆ ಬಂಬ್ರಾಣ ಕೊಟ್ಯದ ಮನೆ ನಿವಾಸಿಯೂ ಕಾಸರಗೋಡಿ ನಲ್ಲಿ ಲಾಟರಿ ಮಾರಾಟಗಾರನಾದ ಉದಯ ಪೂಜಾರಿಯವರ ಪತ್ನಿ ಆರ್. ವಿಜಯ (47) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಪ್ರಸ್ತುತ ಇವರು ಕಾಸರಗೋಡು ಉಮಾ ನರ್ಸಿಂಗ್ ಹೋಂ ಬಳಿಯ ಬಾಡಿಗೆ ಕ್ವಾರ್ಟರ್ಸ್ ನಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ. ಆರ್. ವಿಜಯ ಕಾಸರಗೋಡು ಕೋ-ಆಪರೇಟಿವ್ ಮಾರ್ಕೆಟಿಂಗ್ ಸೊಸೈಟಿಯ ಅಧೀನದಲ್ಲಿ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಸಮೀಪ ದಲ್ಲಿರುವ ಸೂಪರ್ ಬಜಾರ್ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಸಂಜೆ ಕೆಲಸ ಮುಗಿಸಿ ಕ್ವಾರ್ಟರ್ಸ್ಗೆ ನಡೆದು ಹೋಗುತ್ತಿದ್ದ ವೇಳೆ ಕ್ವಾರ್ಟರ್ಸ್ನಿಂದ ಅಲ್ಪ ದೂರ ಕುಸಿದು ಬಿದ್ದಿದ್ದರು. ಕೂಡಲೇ ನಗರದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಆರ್. ವಿಜಯ ಕರಂದ ಕ್ಕಾಡ್ ಶ್ರೀ ವೀರ ಹನುಮಾನ್ ಮಂದಿರದ ಮಾತೃಸಂಘದ ಸಕ್ರಿಯ ಸದಸ್ಯೆಯೂ ಆಗಿದ್ದರು. ಮೃತದೇಹವನ್ನು ಇಂದು ಬೆಳಿಗ್ಗೆ ಕರಂದಕ್ಕಾಡ್ನಲ್ಲಿರುವ ತಾಯಿ ಮನೆಗೆ ಕೊಂಡೊಯ್ದು ಬಳಿಕ ಪಳ್ಳಂ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಕರಂದಕ್ಕಾಡ್ನ ದಿವಂಗತರಾದ ರಾಮ ಪೂಜಾರಿ-ಸೀತಾ ದಂಪತಿಯ ಪುತ್ರಿಯಾದ ಮೃತರು ಪತಿ, ಮಕ್ಕಳಾದ ದೀಪಿಕ ವಿ, ಪ್ರಿಯ ಯು, ಸಹೋ ದರ-ಸಹೋದರಿಯರಾದ ಸದಾ ನಂದ, ಕೇಶವ, ತುಳಸೀದಾಸ್, ಶಾಂತ,ಶ್ಯಾಮಲ, ಆಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






