ಪ್ರೇಮಿಸಿ ಮತಾಂತರಕ್ಕೆ ಒತ್ತಾಯಿಸಿ ಕಿರುಕುಳ: ಯುವತಿ ಆತ್ಮಹತ್ಯೆ; ಪ್ರಿಯತಮನ ಬಂಧನ

ಕೋದಮಂಗಲ: ಮತಾಂತರಕ್ಕೆ ಒತ್ತಾಯಿಸಿ  ಪ್ರಿಯತಮ ನೀಡಿದ ಕಿರುಕುಳ ಸಹಿಸಲಾಗದೆ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಕೋದಮಂಗಲದಲ್ಲಿ ನಡೆದಿದೆ.

ಕೋದಮಂಗಲ ಕರುಕಡಿ ಕಡಿಕುಮ್ಮಲ್‌ನ ದಿ| ಎಲ್ದೋಸ್-ಬಿಂದು ದಂಪತಿ ಪುತ್ರ ಟಿಟಿಸಿ ವಿದ್ಯಾ ರ್ಥಿನಿ ಸೋನಾ (23) ಎಂಬಾಕೆ ಆತ್ಮಹತ್ಯೆಗೈದ ಯುವತಿಯಾಗಿದ್ದಾಳೆ. ಇದಕ್ಕೆ ಸಂಬಂಧಿಸಿ ಆಕೆಯ ಪ್ರಿಯತಮ ಅಲಪ್ಪಿ ಅಲಂಙಾಡ್ ಪದಿನಾಯಿರ ಕುಳಂ ತೋಪಿನ್ ತರಂಬಿಲ್‌ನ ರಮೀಸ್ (24) ಎಂಬಾತನನ್ನು ಪೊಲೀಸರು ಬಂಧಿಸಿ  ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂವಾಟುಪುಳದ ಸರಕಾರಿ ಟಿಟಿಸಿ ವಿದ್ಯಾರ್ಥಿನಿಯಾಗಿರುವ ಸೋನಾಳನ್ನು ಪ್ರೀತಿಸಿ ನಕಲಿಯಾಗಿ ರಿಜಿಸ್ಟರ್ ಮದುವೆಯಾಗಿ ಆಕೆಯನ್ನು ಆರೋಪಿ ಆತನ ಮನೆಗೆ ಕರೆದೊಯ್ದನೆಂದೂ, ಲೈಂಗಿಕ ಕಿರುಕುಳ ನೀಡಿದ್ದಾನೆ. ಅನಂತರ ತಮ್ಮ ಧರ್ಮಕ್ಕೆ ಮತಾಂತರಗೊಳ್ಳುವಂತೆ ರಮೀಸ್ ಮತ್ತು ಆತನ ಮನೆಯವರು ನನ್ನನ್ನು ನಿರಂ ತರವಾಗಿ ಒತ್ತಾಯಿಸಿದ್ದು, ಅದಕ್ಕೆ ತಾನು ತಯಾರಾಗದಾಗ ರಮೀಸ್ ಮತ್ತು ಆತನ ಮನೆಯವರು ಅವರ ಮನೆ ಕೊಠಡಿಯೊಳಗೆ ಕೂಡಿಹಾಕಿ ಕ್ರೂರವಾದ ರೀತಿಯಲ್ಲಿ ದೌರ್ಜ ನ್ಯವೆಸಗಿದರೆಂದೂ ಆತ್ಮಹತ್ಯೆಯ ಮೊದಲು  ಸೋನಾ ಬರೆದಿಟ್ಟ ಪತ್ರದಲ್ಲಿ  ತಿಳಿಸಲಾಗಿದೆ.

ರಮೀಸ್ ಅಡ್ಡದಾರಿಯಲ್ಲಿ ಸಾಗುತ್ತಿದ್ದ ವ್ಯಕ್ತಿಯಾಗಿದ್ದಾನೆ. ಆತ ಅನೈತಿಕ ಸಂಬಂಧವನ್ನೂ ಹೊಂದಿದ್ದಾನೆ. ಅದಕ್ಕೆ ಸಂಬಂಧಿಸಿ ಆತನನ್ನು ಈ ಹಿಂದೆ ಪೊಲೀಸರು ಬಂಧಿಸಿರುವ ವಿಷಯ ಬಳಿಕ ನನ್ನ ಗಮನಕ್ಕೆ ಬಂದಿತ್ತು. ಅದರಿಂದಾಗಿ ಆತನನ್ನು ಮದುವೆಯಾಗಲು ಮತ್ತು ಮತಾಂತರಕ್ಕೆ ನಾನು ತಯಾರಾಗಿಲ್ಲವೆಂದು ಸೋನಾ ಆತ್ಮಹತ್ಯೆ ಪತ್ರದಲ್ಲಿ  ತಿಳಿಸಿದ್ದಾಳೆ.

  ಪತ್ರ ಬರೆದ ಬಳಿಕ  ಕಳೆದ ಶನಿವಾರ ಆಕೆಯ ತಾಯಿ ಮನೆಯ ಕೊಠಡಿ ಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ  ಪತ್ತೆಯಾಗಿ ದ್ದಳು. ಆ ವೇಳೆ ಸೋನಾಳ ತಾಯಿ ಬಿಂದು  ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಅವರು ಮನೆಗೆ ಹಿಂತಿರುಗಿದಾಗಷ್ಟೇ ಸೋನಾ ನೇಣಿಗೆ ಶರಣಾಗಿರುವುದನ್ನು ಕಂಡು  ಒಮ್ಮೆಲೇ ದಿಗ್ಬ್ರಾಂತಿಗೊಂಡರು.  ಮತಾಂತರ ಗೈದಲ್ಲಿ ಮಾತ್ರವೇ ಮದುವೆಯಾಗು ವೆನೆಂದು ಒತ್ತಾಯಿಸಿ ತನ್ನ ಸಹೋ ದರಿಯನ್ನು ರಮೀಸ್ ಆತನ ಮನೆಯ ಕೊಠಡಿಯೊಳಗೆ ಕೂಡಿ ಹಾಕಿ ಆಕೆಗೆ ಹಿಂಸೆ ನೀಡಿದ ನೆಂದು ಇನ್ನೊಂದೆಡೆ ಸೋನಾಳ ಸಹೋದರ ಬೇಸಿನ್ ತಿಳಿಸಿದ್ದಾರೆ. ವಿಷಯ ತಿಳಿದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ

You cannot copy contents of this page