ಸೀತಾಂಗೋಳಿ: ವಾಸಿಸುವ ಕಟ್ಟಡದ ಒಂದನೇ ಮಹಡಿಯ ಕಬ್ಬಿಣದ ಕೊಂಡಿಗೆ ಸೀರೆ ಕಟ್ಟಿ ಕುತ್ತಿಗೆಗೆ ಬಿಗಿದ ಬಳಿಕ ಯುವತಿ ಕೆಳಕ್ಕೆ ಹಾರಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಸೀತಾಂಗೋಳಿ ಅಪ್ಸರ ಮರದ ಮಿಲ್ನಲ್ಲಿ 10 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ ಉತ್ತರ ಪ್ರದೇಶದ ಮುಹಮ್ಮದಾಬಾದ್ ಸಿರೌಳಿ ನಿವಾಸಿ ಖಾಲಿದ್ ಎಂಬವರ ಪತ್ನಿ ತಸ್ಲಿ ಮುನ್ನಿಶ (40) ಸಾವಿಗೀಡಾದ ಯುವತಿ. ಮೊನ್ನೆ ರಾತ್ರಿ 8.30೦ರ ವೇಳೆ ಘಟನೆ ನಡೆದಿದೆ. ಮರದ ಮಿಲ್ನ ಹಿಂಭಾಗದಲ್ಲೇ ಇರುವ ಕ್ವಾರ್ಟರ್ಸ್ನಲ್ಲಿ ಯುವತಿ ಪತಿ ಹಾಗೂ ಮಗುವಿನೊಂದಿಗೆ ವಾಸಿಸುತ್ತಿದ್ದಾರೆ. ಮೊನ್ನೆ ರಾತ್ರಿ ಈಕೆ ಕಟ್ಟಡದ ಕೊಂಡಿಗೆ ಸೀರೆ ಕಟ್ಟಿ ಕುತ್ತಿಗೆಗೆ ಬಿಗಿದು ಕೆಳಕ್ಕೆ ಹಾರಿದ್ದು, ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಈಕೆಯನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
