ಪೆರ್ಲ: ಮಾರಕರೋಗ ತಗಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಮಣಿಯಂಪಾರೆ ಬಳಿಯ ದೇರಡ್ಕ ಸಂಟನಡ್ಕ ನಿವಾಸಿ ಜಯರಾಮ ಪೂಜಾರಿ ಎಂಬವರ ಪತ್ನಿ ಪದ್ಮಾವತಿ (35) ಇಂದು ಬೆಳಿಗ್ಗೆ ನಿಧನ ಹೊಂದಿದರು. ಕಳೆದ ಕೆಲವು ಸಮಯಗಳಿಂದ ಚಿಕಿತ್ಸೆಯಲ್ಲಿದ್ದರು. ಇವರ ಚಿಕಿತ್ಸೆಗಾಗಿ ಸ್ಥಳೀಯರು ಸಹಾಯ ಹಸ್ತ ಚಾಚಿದ್ದರು. ಆದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಮೃತರು ಪತಿ, ಮಕ್ಕಳಾದ ರಶ್ಮಿತಾ, ತೀಕ್ಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.