ಮಾನ್ಯ: ಯುವತಿಯೋರ್ವೆ ಕ್ವಾರ್ಟರ್ಸ್ನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾಳೆ. ಕೊಲ್ಲಂಗಾನದ ಕ್ವಾರ್ಟರ್ಸ್ ನಲ್ಲಿ ವಾಸಿಸುವ ಆಯಿಷತ್ ಜಸೀಲ (24) ಮೃತಪಟ್ಟ ಯುವತಿ. ಇಂದು ಬೆಳಿಗ್ಗೆ ಈಕೆ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾ ಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸ ಲಾಗಿದೆ. ಚರ್ಲಡ್ಕ ನಿವಾಸಿ ಅಬ್ದುಲ್ ರಜಾಕ್ ಎಂಬವರ ಪುತ್ರಿಯಾದ ಮೃತಳು ತಾಯಿ ಆಮಿನ, ಪುತ್ರಿ ಫಲುವ, ಸಹೋದರ-ಸಹೋದರಿಯರಾದ ನಾಸಿಲ, ಫರ್ಹಾನ, ಬಿಷರ್, ಜೈನ್ ಹಾಗೂ ಅಪಾರ ಬಂಧು -ಮಿತ್ರರನ್ನು ಅಗಲಿದ್ದಾಳೆ.






