ಕಾಸರಗೋಡು: ಯುವತಿ ಯೋರ್ವೆ ಕ್ವಾರ್ಟರ್ಸ್‌ನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡ್ಲು ಮೀಪುಗುರಿ ನಿವಾಸಿ ಉದಯ ಎಂಬವರ ಪುತ್ರಿ ಸಜಿನಾ (18) ಮೃತಪಟ್ಟ ಯುವತಿಯಾಗಿದ್ದಾಳೆ. ನಿನ್ನೆ ಈಕೆ ಮನೆಯಲ್ಲಿದ್ದಳು. ಕಾಸರಗೋ ಡಿನ ವ್ಯಾಪಾರ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ತಾಯಿ ಸುಜಾತ ಸಂಜೆ ೬.೪೦ರ ವೇಳೆ ಮನೆಗೆ ಮರಳಿ ಬಂದಾಗ ಸಜಿನಾ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಮೃತಳು ತಂದೆ, ತಾಯಿ, ಸಹೋದರಿಯರಾದ ಉಷಾ, ನಿಷಾ, ಸುಜಿನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ. ಘಟನೆ ಬಗ್ಗೆ ಕ್ವಾರ್ಟರ್ಸ್ ಮಾಲಕ ಲೋಕೇಶ್ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.