ಮಂಜೇಶ್ವರ: ಕೆಲಸ ಮುಗಿಸಿ ವಾಸ ಸ್ಥಳಕ್ಕೆ ನಡೆದು ಹೋಗುತ್ತಿದ್ದ ೨೬ರ ಹರೆಯದ ಯುವತಿಗೆ ಕಿರು ಕುಳ ನೀಡಿ ರುವುದಾಗಿ ದೂರಲಾಗಿದೆ. ಘಟನೆಯಲ್ಲಿ ಕೇಸು ದಾಖಲಿಸಿ ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ 8.30ಕ್ಕೆ ಘಟನೆ ನಡೆದಿದೆ. ಯುವತಿ ಹಾಗೂ ಸಹೋದ್ಯೋಗಿ ಗಳಾದ ಇಬ್ಬರು ಯುವತಿಯರು ವಾಸ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ಮಧ್ಯೆ ಸ್ಥಳಕ್ಕೆ ತಲುಪಿದ ಅಕ್ರಮಿ ೨೬ರ ಹರೆಯದ ಯುವತಿಯನ್ನು ಹಿಡಿದಿರುವುದಾಗಿಯೂ, ಯುವತಿ ಹಾಗೂ ಜೊತೆಗಿದ್ದವರು ಸೇರಿ ಅಕ್ರಮಿಯನ್ನು ಸೆರೆ ಹಿಡಿದು ಬೊಬ್ಬೆ ಹೊಡೆದಾಗ ಅವರ ಕೈಯಿಂದ ತಪ್ಪಿಸಿ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ತಲುಪಿದ ಪೊಲೀಸರು ಯುವತಿಯರಿಂದ ದೂರು ಸ್ವೀಕರಿಸಿ ಕೇಸು ದಾಖಲಿಸಿದ್ದಾರೆ. ಸ್ಥಳದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿ ಅಕ್ರಮಿಯ ಗುರುತು ಹಚ್ಚಲು ಯತ್ನ ಮುಂದುವರಿಯುತ್ತಿದೆ.
