ಕಾಸರಗೋಡು: ಜೊತೆಯಲ್ಲಿ ವಾಸಿಸುತ್ತಿದ್ದ ಮಧ್ಯೆ ಸಿಟ್ಟುಗೊಂಡು ತೆರಳಿದ ಯುವತಿಯನ್ನು ಕ್ವಾರ್ಟರ್ಸ್‌ಗೆ ನುಗ್ಗಿ ಮಾನಭಂಗಗೈದಿರುವುದಾಗಿ ದೂರಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ 30ರ ಹರೆಯದ ಯುವತಿ ನೀಡಿದ ದೂರಿನಂತೆ ಚಿತ್ತಾರಿ ನಿವಾಸಿ ಸಜೀರ್ ಎಂಬಾತನ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ. ಮನೆಯಿಂದ ಸಿಟ್ಟುಗೊಂಡು ತೆರಳಿದ ಯುವತಿ ಎರ್ನಾಕುಳಂನಲ್ಲಿ ವಾಸಿಸುತ್ತಿದ್ದರು. ಈ ಮಧ್ಯೆ ಪರಿಚಯಗೊಂಡ ಸಜೀರ್‌ನೊಂದಿಗೆ ಯುವತಿ ಸ್ನೇಹದಿಂದಿದ್ದರು. ಬಳಿಕ ಇವರಿಬ್ಬರೂ ಒಂದಾಗಿ ವಾಸಿಸಲಾರಂಭಿಸಿದರು. ಈ ಮಧ್ಯೆ ಯುವತಿ ಸಜೀರ್‌ನೊಂದಿಗೆ ಭಿನ್ನಾಭಿಪ್ರಾಯ ಹೊಂದಿ ಸಿಟ್ಟುಗೊಂಡು ಕಾಸರಗೋಡಿಗೆ ತಲುಪಿದ್ದರು. ಆದರೆ ಸ್ವಂತ ಮನೆಗೆ ತೆರಳದೆ ಕಳನಾಡಿನ ಒಂದು ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಈ ಮಧ್ಯೆ ಸಜೀರ್ ತನ್ನನ್ನು ಮಾನಭಂಗಗೈದಿರುವುದಾಗಿ ಯುವತಿ ದೂರು ನೀಡಿದ್ದಾರೆ.







