ಶಾಸಕ ರಾಹುಲ್ ವಿರುದ್ಧ ದೂರು ನೀಡಿದ ಯುವತಿ ಆತ್ಮಹತ್ಯೆಗೆತ್ನ: . ತಲೆಮರೆಸಿಕೊಂಡಿರುವ ಶಾಸಕನಿಗಾಗಿ ಕಾಸರಗೋಡು ಸೇರಿ ರಾಜ್ಯಾದ್ಯಂತ ಶೋಧ

ತಿರುವನಂತಪುರ: ಯೂತ್ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ, ಪಾಲ ಕ್ಕಾಡ್ ಶಾಸಕ ರಾಹುಲ್ ಮಾಂಕೂಟ ತ್ತಿಲ್ ವಿರುದ್ಧ ಲೈಂಗಿಕ ಕಿರುಕುಳ ಆರೋ ಪಿಸಿ ದೂರು ನೀಡಿದ ತಿರುವನಂತಪುರ  ಪರಿಸರ ನಿವಾಸಿಯಾಗಿರುವ  ಸಂತ್ರಸ್ತೆ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಮಾಹಿತಿ ಈಗ ಹೊರಬಂದಿದೆ. ಈಕೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿರು ವುದಾ ಗಿಯೂ ಮಾಹಿತಿ ಲಭಿಸಿದೆ.

 ಲೈಂಗಿಕ ಕಿರುಕುಳಕ್ಕೊಳಗಾದ ಪರಿಣಾಮ ಗರ್ಭಿಣಿಯಾದ  ಆ ಯುವತಿಯನ್ನು ಬಲವಂತವಾಗಿ ಗರ್ಭಪಾತಕ್ಕೊಳ ಪಡಿಸಿದ ಬೆನ್ನಲ್ಲೇ ಆಕೆ   ಅಮಿತ ಮಾತ್ರೆ ಸೇವಿಸಿ  ಆತ್ಮಹತ್ಯೆಗೆ ಯತ್ನಿಸಿ ನಂತರ ದಿನಗಳ ತನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿ ಬಂದಿತ್ತು. ಇದಾದ ಕೆಲವು ದಿನಗಳ ನಂತರ ಆಕೆ ತನ್ನ ಕೈಯ ನರವನ್ನು ಕತ್ತರಿಸಿ ಆಸ್ಪತ್ರೆಯಲ್ಲಿ  ದಾಖಲು ಗೊಂಡಿದ್ದಳು. ಗರ್ಭಪಾತಕ್ಕಾಗಿ ಎರಡು ಮಾತ್ರೆಗಳನ್ನು ಬಲವಂತವಾಗಿ  ಸೇವಿಸುವಂತೆ  ಮಾಡ ಲಾಯಿತೆಂದು ಆಕೆ ವೈದ್ಯರಿಗೆ ನೀಡಿದ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾಳೆ.

ಈ ವಿಷಯವನ್ನು ವೈದ್ಯರು ಪೊಲೀಸರಿಗೂ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಳೆದ ಆರು ದಿನಗಳಿಂದ ತಲೆಮರೆಸಿಕೊಂಡಿರುವ ರಾಹುಲ್ ಮಾಂಕೂಟತ್ತಿಲ್‌ನ ಪತ್ತೆಯಾಗಿ ಪೊಲೀ ಸರು ತೀವ್ರ ಶೋಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಅದರಂತೆ ಕಾಸರಗೋಡು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಪೊಲೀಸರುಶೋಧ ಆರಂಭಿಸಿದ್ದಾರೆ. ತಪ್ಪಿಸಿಕೊಳ್ಳಲು ರಾಹುಲ್‌ಗೆ  ಸಿನಿಮಾ ನಟಿಯೋರ್ವೆ ಆಕೆಯ ಕೆಂಪು ಬಣ್ಣದ ಕಾರು ನೀಡಿದ್ದಳೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದ್ದು, ಅದರಿಂದಾಗಿ ಆಕೆಯನ್ನು ಪೊಲೀಸರು ವಿಚಾರಣೆ ಗೊಳಪಡಿಸಲು ಮುಂದಾಗಿ ದ್ದಾರೆ. ರಾಹುಲ್ ನಿರೀಕ್ಷಣಾ ಜಾಮೀನು ಕೋರಿ ರಾಹುಲ್ ಸಲ್ಲಿಸಿರುವ ಅರ್ಜಿಯನ್ನು  ತಿರುವನಂತಪುರ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಲಯ ನಾಳೆ ಪರಿಶೀಲಿಸಲಿದೆ. ಇದರಿಂದಾಗಿ ರಾಹುಲ್‌ಗೆ ನಾಳೆಯ ದಿನ ಅತ್ಯಂತ ನಿರ್ಣಾಯಕವಾಗಲಿದೆ. ಅದರ ಮೊದಲು ರಾಹುಲ್‌ನನ್ನು ಸೆರೆಹಿಡಿಯುವ ಶತಪ್ರಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ.

RELATED NEWS

You cannot copy contents of this page