ಶಬರಿಮಲೆ ತೀರ್ಥಾಟಕರನ್ನು ಗುರಿಯಿರಿಸಿ ಕಳವು ನಡೆಸುವ ಇಬ್ಬರು ಯುವತಿಯರು ಸೆರೆ: ಒಳಉಡುಪುನಲ್ಲಿ 21 ಸಾವಿರ ರೂ. ಪತ್ತೆ

ಪತ್ತನಂತಿಟ್ಟ:  ಶಬರಿಮಲೆ ತೀರ್ಥಾಟಕರನ್ನು ಗುರಿಯಿರಿಸಿ ಕಳವು ನಡೆಸಲು ತಲುಪಿದ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಂಬತ್ತೂರು ನಿವಾಸಿ ಪಾರ್ವತಿ, ತೂತುಕ್ಕುಡಿಯ ಗೀತ ಎಂಬಿವರು ಬಂಧಿತ ಯುವತಿಯರು. ಇದೇ ವೇಳೆ ಇವರ ಸರಿಯಾದ ಹೆಸರುಗಳು ಏನೆಂದು ತಿಳಿದುಬಂದಿಲ್ಲ. ಹಲವು ಕಳವು ಪ್ರಕರಣಗಳಲ್ಲಿ ಈ ಇಬ್ಬರು ಆರೋಪಿಗಳಾಗಿದ್ದಾರೆನ್ನಲಾಗಿದೆ.  ವಿವಿಧ ಹೆಸರುಗಳನ್ನು ಇವರು ವಿವಿಧೆಡೆ ನೀಡುತ್ತಿದ್ದಾರೆ.  ಸೆರೆಗೀಡಾದ ಯುವತಿಯರ ಒಳ ಉಡುಪಿನೊಳಗೆ ಬಚ್ಚಿಟ್ಟಿದ್ದ 21 ಸಾವಿರ ರೂಪಾಯಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.  ಎರುಮೇಲಿ ಪ್ರದೇಶ ಕೇಂದ್ರೀಕರಿಸಿ ಕಳವು ನಡೆಸುವ ಗುರಿಯೊಂದಿಗೆ ಇವರು ತಲುಪಿರುವುದಾಗಿ ಪೊಲೀ ಸರು ಅಂದಾಜಿಸಿದ್ದಾರೆ. ನಿನ್ನೆ ಮಧ್ಯಾಹ್ನ 12.30ರ ವೇಳೆ  ಕೋಳಂಜೇರಿಯಿಂದ ರಾನ್ನಿಗೆ ತೆರಳುವ   ಖಾಸಗಿ ಬಸ್‌ನಲ್ಲಿ ಈ ಯುವತಿಯರು ಬಟ್ಟೆ ಬರೆ ಬದಲಾಯಿಸುವುದು ನೌಕರರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಶಯಗೊಂಡ ನೌಕರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ನಡೆಸಿದ ಪರಿಶೀಲನೆಯಲ್ಲಿ ಇವರು ಕಳವು ಉದ್ದೇಶದಿಂದ ಬಂದವರಾಗಿದ್ದಾ ರೆಂದು ತಿಳಿದುಬಂದಿದೆ. 

RELATED NEWS

You cannot copy contents of this page