ವ್ಯಕ್ತಿಪಲ್ಲಟ ನಡೆಸಿ ಪ್ಲಸ್‌ಟು ಪರೀಕ್ಷೆಗೆ ಹಾಜರಾದ ಯುವಕ ಬಂಧನ ; ವಿದ್ಯಾರ್ಥಿ ವಿರುದ್ಧವೂ ಕೇಸು ದಾಖಲು

ಕುಂಬಳೆ: ವ್ಯಕ್ತಿಪಲ್ಲಟ ನಡೆಸಿ ಯುವಕನೋರ್ವ ಪ್ಲಸ್‌ಟು ಪರೀಕ್ಷೆ ಬರೆದಿರುವುದಾಗಿ ದೂರಲಾಗಿದೆ. ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ವಿ.ಎಸ್. ಬಿನು ನೀಡಿದ ದೂರಿನಂತೆ  ಕೇಸು ದಾಖಲಿಸಿ ಕೊಂಡ ಕುಂಬಳೆ ಪೊಲೀಸರು ವ್ಯಕ್ತಿ ಪಲ್ಲಟ ನಡೆಸಿದಾತನನ್ನು ಬಂಧಿಸಿ ದ್ದಾರೆ. ಬಂಬ್ರಾಣ ಅಂಡಿತ್ತಡ್ಕದ ಮುಹಮ್ಮದ್ ಮುಕ್ತಾರ್ (20) ಎಂಬಾತನನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ. ಜೋಸ್, ಎಸ್.ಐ ಅನಂತಕೃಷ್ಣನ್ ಆರ್. ಮೆನೋನ್ ಎಂಬಿವರು ಸೇರಿ ಬಂಧಿಸಿದ್ದಾರೆ.  ಘಟನೆಗೆ ಸಂಬಂಧಿಸಿ ಪ್ಲಸ್‌ಟು  ವಿದ್ಯಾರ್ಥಿ ವಿರುದ್ಧವೂ ಕೇಸು ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಬಳಿಕ  ನಡೆದ ಕಂಪ್ಯೂಟರ್ ಅಪ್ಲಿಕೇಶನ್ ಪರೀಕ್ಷೆ ಯಲ್ಲಿ  ವ್ಯಕ್ತಿ ಪಲ್ಲಟ ನಡೆಸಲಾಗಿದೆ. ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಯ ಅರಿವಿನೊಂದಿಗೆ  ವ್ಯಕ್ತಿ ಪಲ್ಲಟ ನಡೆಸಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.  

RELATED NEWS

You cannot copy contents of this page