ಮಂಜೇಶ್ವರ: ಬೈಕ್‌ನಲ್ಲಿ ಮಾದಕದ್ರವ್ಯ ಸಾಗಿಸಿದ ಆರೋಪ ದಂತೆ ಅಬಕಾರಿ ತಂಡ ಓರ್ವನನ್ನು ಬಂಧಿಸಿದೆ. ಕುಂಜತ್ತೂರು ಪದವು ನಿವಾಸಿ ಯಾಸಿನ್ ಇಮ್ರಾಜ್ ಕೆ.ಎಂ. (36) ಬಂಧಿತ ಯುವಕ.
ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಶೋಬ್‌ರ ನೇತೃತ್ವದ ತಂಡ ಕುಂಜತ್ತೂರಿನಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಮಾದಕದ್ರವ್ಯವಾದ 4 ಗ್ರಾಂ ಮೆಥಾಫಿಟಮಿನ್ ಸಾಗಿಸಿದ ಆರೋಪ ದಂತೆ ಯಾಸಿನ್ ಇಮ್ರಾಜ್‌ನನ್ನು ಸೆರೆ ಹಿಡಿದು ಆತನ ವಿರುದ್ಧ ಎನ್‌ಡಿಪಿಎಸ್ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿಕೆವಿ ಸುರೇಶ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಶಿಜಿತ್ ವಿ.ವಿ, ಸೋನು ಸೆಬಾಸ್ಟಿಯನ್, ಅತುಲ್ ವಿ.ವಿ, ಮೋಹನ್ ಕುಮಾರ್ ಎಲ್, ರೀನಾ ವಿ. ಎಂಬವರು ಒಳಗೊಂಡಿದ್ದರು.