ಕುಂಬಳೆ ಸಿಎಚ್‌ಸಿ ರಸ್ತೆಯಿಂದ ಗಾಂಜಾ ಸಹಿತ ಯುವಕ ಸೆರೆ

ಕುಂಬಳೆ: ಇಲ್ಲಿನ ಸಿಎಚ್‌ಸಿ ರಸ್ತೆಯಲ್ಲಿ ಗಾಂಜಾ ಸಹಿತ ಯುವಕ ಸೆರೆಯಾಗಿದ್ದಾನೆ. ಕೊಪಾಡಿ ನಿವಾಸಿ ಸಿ.ಕೆ. ಚೇತನ್ (26)ನನ್ನು ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಕೆ.ವಿ. ಶ್ರಾವಣ್ ಹಾಗೂ ತಂಡ ಸೆರೆ ಹಿಡಿದಿದೆ. ನಿನ್ನೆ ಮಧ್ಯಾಹ್ನ 12 ಗಂಟೆಗೆ ಘಟನೆ ನಡೆದಿದೆ. ವಿದ್ಯಾರ್ಥಿಗಳು ಸಹಿತದವರಿಗೆ ಗಾಂಜಾ ವಿತರಿಸುವ ವ್ಯಕ್ತಿಯಾಗಿದ್ದಾನೆ ಸೆರೆಯಾದವ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಿವೆಂಟಿವ್ ಆಫೀಸರ್ ಕೆ.ವಿ. ಮನಾಸ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಇ. ರಾಹುಲ್, ಪ್ರವೀಣ್ ಕುಮಾರ್, ಮಹಿಳಾ ಸಿವಿಲ್ ಎಕ್ಸೈಸ್ ಆಫೀಸರ್ ಎಂ.ವಿ. ಕೃಷ್ಣಪ್ರಿಯ ದಾಳಿಯಲ್ಲಿ ಭಾಗವಹಿಸಿದರು.

You cannot copy contents of this page