ಕುಂಬಳೆ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸಿಪಿಎಂ ನೇತಾರನೂ, ಅಧ್ಯಾಪಕನಾದ ಸುಧಾಕರನನ್ನು ಶಾಲೆಯಿಂದ ಹೊರ ಹಾಕಬೇಕೆಂದು ಒತ್ತಾಯಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕಳತ್ತೂರು ಶಾಲೆಗೆ ಮಾರ್ಚ್ ನಡೆಸಿದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಾರ್ಚ್ ನಡೆಸಲಾಯಿತು. ಮಾರ್ಚ್ ಶಾಲೆಗೆ ತಲುಪುವ ಮೊದಲೇ ಪೊಲೀಸರು ತಡೆಯೊಡ್ಡಿದರು. ಕುಂಬಳೆ ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಶೆರಿನ್ ಕಯ್ಯಂಕೂಡ್ಲು, ವಿಧಾನಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ಜುನೈದ್ ಉರ್ಮಿ, ಫಾರೂಕ್, ದಯಾನಂದ ಬಾಡೂರು, ರವಿರಾಜ್ ಮೊದಲಾದವರು ನೇತೃತ್ವ ನೀಡಿದರು. ೧೯೯೫ರಿಂದಲೇ ಸುಧಾಕರ ಬೆದರಿಕೆಯೊಡ್ಡಿ ನಿರಂತರ ಕಿರುಕುಳ ನೀಡಿರುವುದಾಗಿಯೂ ಈಗ ಕಿರುಕುಳದ ಹೊರತು ಪತಿ ಹಾಗೂ ಮಕ್ಕಳ ಸಹಿತ ಕುಟುಂಬಕ್ಕೆ ಸುಧಾಕರ ಕೊಲೆಬೆದರಿಕೆಯೊಡ್ಡುತ್ತಿರುವುದಾಗಿ ಮಹಿಳೆ ಡಿಜಿಪಿಗೆ ದೂರು ನೀಡಿದ್ದರು.





