ಕಾಸರಗೋಡು: ನಗರದ ಕೋಟೆಕಣಿ ನಿವಾಸಿಯಾದ ಯುವಕ ಮಂಗಳೂರಿನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೋಟೆಕಣಿಯ ಬಾಲಕೃಷ್ಣ ಎಂಬವರ ಪುತ್ರ ಸೋನಾಲ್ (24) ಮೃತ ವ್ಯಕ್ತಿ. ಎಂಬಿಎ ಶಿಕ್ಷಣದ ಬಳಿಕ ಸೋನಾಲ್ ಮಂಗಳೂರಿನಲ್ಲಿ ವಾಸಿಸಿ ಸ್ನೇಹಿತರೊಂದಿಗೆ ಸೇರಿ ಬೆಡ್‌ಶೀಟ್ ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದರು. ಶನಿವಾರ ಸಂಜೆ ಸ್ನೇಹಿತರು ಹೊರಗೆ ತೆರಳಿದ ಹೊತ್ತಿನಲ್ಲಿ ವಾಸಸ್ಥಳದ ಕೊಠಡಿಯೊಳಗೆ ಸೋನಾಲ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕೋಟೆಕಣಿಯ ಮನೆಗೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತರು ತಂದೆ, ತಾಯಿ ಶಶಿಕಲಾ, ಸಹೋದರಿಯರಾದ ಶಾಲಿನಿ, ಸ್ನೇಹ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






