20ರ ಹರೆಯದ ಯುವಕ ನೇಣು: ಮನನೊಂದ ಅಜ್ಜಿ, ಸಹೋದರಿ ಆತ್ಮಹತ್ಯೆ

ಕಣ್ಣೂರು: ಕುಟುಂಬವೊಂದರ ಮೂರು ಮಂದಿ ಆತ್ಮಹತ್ಯೆಗೈದ ಸ್ಥಿತಿ ಯಲ್ಲಿ ಪತ್ತೆಹಚ್ಚಲಾಗಿದೆ. ಕೂತು ಪರಂಬ್ ನೀರ್ವೇಲಿ ಎಂಬಲ್ಲಿನ ನಿಮಿಷ ನಿವಾಸದ ಇ. ಕಿಶನ್ (20), ವಿ.ಕೆ. ರೆಜಿ, ಸಹೋದರಿ ರೋಜ ಎಂಬಿವರು ಆತ್ಮಹತ್ಯೆಗೈದವರು. ಮೂರಿಯಾಡ್ ಚೆಮ್ಮಾಲ್ ರಸ್ತೆಯ ಅಜ್ಜಿಯ ಮನೆಯಲ್ಲಿ ಈ ಮೂವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಕಿಶನ್‌ನನ್ನು ನಿನ್ನೆ ಸಂಜೆ ಅಜ್ಜಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿ ತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಅಜ್ಜಿ ಹಾಗೂ ಸಹೋದರಿ ಹೊರಗೆ ಹೋಗಿದ್ದರು. ಸಂಜೆ ಮನೆಗೆ ತಲುಪಿದಾಗ ನೆರೆಮನೆ ನಿವಾಸಿಗಳು ಕಿಶನ್ ಆತ್ಮಹತ್ಯೆಗೈದ ವಿಷಯವನ್ನು ತಿಳಿಸಿದ್ದರು. ಮೊಮ್ಮಗ ಅಗಲಿದ ಬೇಸರದಲ್ಲಿ ಅಜ್ಜಿ ಹಾಗೂ ಸಹೋದರಿ ನೇಣು ಬಿಗಿದು ಆತ್ಮಹತ್ಯೆಗೈದಿರಬೇಕೆಂದು ಶಂಕಿಸ ಲಾಗಿದೆ. ಕಿಶನ್ ಪೋಕ್ಸೋ ಪ್ರಕರ ಣವೊಂದರಲ್ಲಿ ಆರೋಪಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆಗಾಗ ಅಜ್ಜಿಯ ಮನೆಗೆ ಬಂದು ವಾಸಿಸುತ್ತಿದ್ದ ಕಿಶನ್ ಶುಕ್ರವಾರ ಸಂಜೆ ಗೆಳೆಯರ ಜೊತೆಗೆ ತಲುಪಿದ್ದನು. ಗೆಳೆಯರು ಹಿಂತಿರುಗಿದ ಬಳಿಕ ಕಿಶನ್ ನೇಣು ಬಿಗಿರಬೇಕೆಂದು ಶಂಕಿಸಲಾಗಿದೆ. ಮೃತದೇಹವನ್ನು ತಲಶ್ಶೇರಿಯ ಆಸ್ಪತ್ರೆಗೆ ಕೊಂಡೊಯ್ದಿದ್ದು ಬಳಿಕ ಮನೆಗೆ ತರುವ ವೇಳೆ ಅಜ್ಜಿ ಹಾಗೂ ಸಹೋದರಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂತುಪರಂಬ್ ಪಿಕೆಎಸ್ ಟೂರ್ಸ್ ಆಂಡ್ ಟ್ರಾವೆಲ್ಸ್‌ನ ಮಾಲಕ ಸುನಿಲ್- ನಿಮಿಷ ದಂಪತಿ ಪುತ್ರನಾಗಿದ್ದಾನೆ ಕಿಶನ್. ಸಹೋದರ ಅಕ್ಷಯ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

You cannot copy contents of this page