ಮಧೂರು: ಕೇರಳೋತ್ಸವವನ್ನು ಹೊರತುಪಡಿಸಿದ ಮಧೂರು ಪಂಚಾಯತ್ ವಿರುದ್ಧ ಯೂತ್ ಲೀಗ್ ಪ್ರತಿಭಟಿಸಿದೆ. ಪಂಚಾಯತ್ ಮೈದಾನವನ್ನು ಸಂರಕ್ಷಿಸಬೇಕು ಎಂದು ಯೂತ್ ಲೀಗ್ ಈ ವೇಳೆ ಆಗ್ರಹಿಸಿದೆ. ಪಂಚಾಯತ್ ಕಚೇರಿ ಮುಂಭಾಗ ಯುವಕರು ಕಾಲ್ಚೆಂಡಾಟ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಕೇರಳೋತ್ಸವದ ಸ್ಪರ್ಧಾ ಫಲಿತಾಂಶಗಳನ್ನು ಬುಡಮೇ ಲುಗೊಳಿಸಿರುವುದು ವಿವಾದಕ್ಕೆ, ಘರ್ಷಣೆಗೆ ಹೇತುವಾಗಿತ್ತೆಂದು ಯೂತ್ ಲೀಗ್ ಆರೋಪಿಸಿದೆ.
ಈ ವರ್ಷ ಕೇರಳೋತ್ಸವ ನಡೆಸಿದರೆ ಅದರ ಮುಂದುವರಿಕೆ ಉಂಟಾಗಬಹುದು ಎಂದು ಅದು ಮುಂದೆ ಬರಲಿರುವ ಚುನಾವಣೆಯಲ್ಲಿ ತಿರುಗೇಟಾಗಬಹುದೆಂದು ಹೆದರಿ ಆಡಳಿತ ಸಮಿತಿ ಕೇರಳೋತ್ಸವವನ್ನು ನಡೆಸುತ್ತಿಲ್ಲವೆಂದು ಮುಷ್ಕರನಿರತರು ಆರೋಪಿಸಿದರು. ಯೂತ್ ಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು ಉದ್ಘಾಟಿಸಿದರು.