ಕಾಸರಗೋಡು: ಯುವಕನನ್ನು ಕಡಿದು ಗಾಯಗೊಳಿಸಿದ ಪ್ರಕರಣ ದಲ್ಲಿ ಆತನ ಸಹೋದರನನ್ನು ಹೊಸ ದುರ್ಗ ಪೊಲೀಸರು ಬಂಧಿಸಿದ್ದಾರೆ. ಚಿತ್ತಾರಿ ರಾವಣೇಶ್ವರ ಪಾಣಂತೋಡು ನಿವಾಸಿ ಶೈಜು ಬಂಧಿತ ಆರೋಪಿ. ಕಳೆದ ಗುರುವಾರ ಮದ್ಯದಮಲಿನಲ್ಲಿ ತನ್ನ ಸಹೋದರ ಶಾಜಿ (47) ನೊಂದಿಗೆ ಜಗಳವಾಡಿ ಕತ್ತಿಯಿಂದ ಆತನ ತಲೆಗೆ ಕಡಿದು ಗಾಯ ಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಶೈಜುವನ್ನು ಬಂಧಿಸಲಾ ಗಿದೆ. ಗಂಭೀರ ಗಾಯಗೊಂಡ ಶಾಜಿಯನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.







