ಪ್ರಾಯಪೂರ್ತಿಯಾಗದ ಬಾಲಕಿಯನ್ನು ದೌರ್ಜನ್ಯಗೈದು ಗರ್ಭಿಣಿಯನ್ನಾಗಿಸಿ ತಲೆಮರೆಸಿಕೊಂಡಿದ್ದ ಯೂಟ್ಯೂಬರ್ ಸೆರೆ

ತೃಶೂರು: ಪ್ರಾಯ ಪೂರ್ತಿಯಾಗದ ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದು ದೌರ್ಜನ್ಯಗೈದು ಗರ್ಭಿಣಿಯನ್ನಾಗಿ ಮಾಡಿದ ಪ್ರಕರಣದಲ್ಲಿ ಯೂಟ್ಯೂಬರ್ ಸೆರೆಯಾಗಿದ್ದಾನೆ. ಅಂಬಿಳಿ ಎಂದು ಕರೆಯಲ್ಪಡುವ ಕುಂಬಳಂಙಾಡ್ ನಿವಾಸಿ ಪಳ್ಳಿಯೆತ್ ಪರಂಬಿಲ್ ವಿಘ್ನೇಶ್‌ಕೃಷ್ಣ (24)ನನ್ನು ವಡಂಕಾಜೇರಿ ಪೊಲೀಸರು ಸೆರೆಹಿಡಿದಿದ್ದಾರೆ. ತಮಿಳುನಾಡು ಸೆಲಂನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಡಂಕಾಚೇರಿ ಇನ್‌ಸ್ಪೆಕ್ಟರ್ ಅನೂಪ್‌ರ ನೇತೃತ್ವದಲ್ಲಿರುವ ತಂಡ ಬಂಧಿಸಿದೆ. 2021ರಲ್ಲೂ ಆರೋಪಿ ಪ್ರಾಯಪೂರ್ತಿಯಾಗದ ಇನ್ನೋರ್ವೆ ಬಾಲಕಿಯನ್ನು ದೌರ್ಜನ್ಯಗೈದ ಪ್ರಕರಣದಲ್ಲಿಯೂ ಒಳಗೊಂಡಿದ್ದನು. ಫೋನ್ ಮೂಲಕ ಪರಿಚಯಗೊಂಡ ಬಾಲಕಿಗೆ ವಿವಾಹ ಭರವಸೆ ನೀಡಿ ದೌರ್ಜನ್ಯಗೈದಿರುವುದಾಗಿ ೨೦೨೧ರಲ್ಲಿ ಕೇಸು ದಾಖಲಿಸಲಾಗಿತ್ತು. ಬಾಲಕಿಯ ಮನೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದು, ಅಂದು ಆರೋಪಿ ಯನ್ನು ತೃಶೂರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಪರಿಸರದಿಂದ ಸೆರೆಹಿಡಿಯಲಾಗಿತ್ತು. ಅಂಬಳಿ ಯಾನೆ ವಿಘ್ನೇಶ್‌ನ ವೀಡಿಯೋಗಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ರಿಮಾಂಡ್‌ಗೊಳಿಸಲಾಗಿದೆ.

RELATED NEWS

You cannot copy contents of this page