ಅಂಗನವಾಡಿ ಆವರಣಗೋಡೆ ಕುಸಿದು ಹಲವು ತಿಂಗಳಾದರೂ ಕಣ್ಣು ಹಾಯಿಸದ ಅಧಿಕಾರಿಗಳು

ಕುಂಬಳೆ: ಶಾಂತಿಪಳ್ಳದಲ್ಲಿರುವ ಅಂಗನವಾಡಿಯ ಆವರಣಗೋಡೆ ಕುಸಿದು ಹಲವು ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳ್ಯಾರೂ ಅತ್ತ  ಕಣ್ಣು ಹಾಯಿಸಿಲ್ಲ ಎಂಬ ದೂರು ಕೇಳಿಬಂದಿದೆ. ಕುಂಬಳೆ ಪಂಚಾಯತ್‌ನ 13ನೇ ವಾರ್ಡ್‌ನಲ್ಲಿರುವ ೬ನೇ ನಂಬ್ರದ ಅಂಗನವಾಡಿಯ ಆವರಣಗೋಡೆ ತಿಂಗಳ ಹಿಂದೆ ಕುಸಿದುಬಿದ್ದಿತ್ತು.  ಸಮೀಪದಲ್ಲಿ ರಸ್ತೆಯೂ ಇದೆ. ಆವgಣಗೋಡೆ ಇಲ್ಲದುದರಿಂದ ಮಕ್ಕಳನ್ನು ಹೊರಗೆ ಬಿಡಲು ಭಯ ಉಂಟಾಗಿರುವುದಾಗಿ ತಿಳಿಸಲಾಗಿದೆ. ಆವರಣಗೋಡೆ ಕುಸಿತ ಬಗ್ಗೆ ಅಧಿಕಾರಿ ಗಳಿಗೆ ಅಂದೇ ತಿಳಿಸಲಾಗಿತ್ತು. ಆದರೆ ಇದುವರೆಗೆ ಅದನ್ನು ಮರುಸ್ಥಾಪಿಸಲು ಕ್ರಮ ಉಂಟಾಗಿಲ್ಲವೆನ್ನಲಾಗಿದೆ.

RELATED NEWS

You cannot copy contents of this page