ಅಂಬಾರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಗುರುಗಳ ಜನ್ಮದಿನಾಚರಣೆ

ಮಂಗಲ್ಪಾಡಿ: ಅಂಬಾರು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಗುರುಗಳ ೧೭೦ನೇ ಜನ್ಮದಿನ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಬೆಳಿಗ್ಗೆ ಗಣಹೋಮ, ಭಜನೆ ನಡೆಯಿತು. ಧಾರ್ಮಿಕ ಸಭೆಯಲ್ಲಿ ದೈವಪಾತ್ರಿ ಶೇಖರ ಪೂಜಾರಿ ಅಧ್ಯಕ್ಷತೆ ವಹಿಸಿದರು. ವೀರಪ್ಪ ಅಂಬಾರು ಧಾರ್ಮಿಕ ಭಾಷಣ ಮಾಡಿದರು. ಶುಭಕರ ಶೆಟ್ಟಿ ತೋಟ, ಪಂ. ಸದಸ್ಯೆ ಸುಧಾ ಗಣೇಶ್, ಸಂಘದ ಅಧ್ಯಕ್ಷ ಸಚಿನ್, ಹರಿತ ಕುಮಾರ್ ಅಂಬಾರು ಉಪಸ್ಥಿತರಿದ್ದರು.

ಈ ವೇಳೆ  ಕಳೆದ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆದು ಜಯ ಗಳಿಸಿದ ವಿದ್ಯಾರ್ಥಿಗಳಾದ ಶ್ರೀವಲ್ಲಿ ಚೆರುಗೋಳಿ, ತಿಲಕ್‌ರಾಜ್ ಬೇಕೂರು, ಅನುಶ್ರೀ ಅಡ್ಕ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ಜರಗಿತು. ಸಚಿನ್ ಸ್ವಾಗತಿಸಿ, ಕಿಶನ್ ಕುಮಾರ್ ವಂದಿಸಿದರು.

You cannot copy contents of this page