ಅಂಬೇಡ್ಕರ್ ವಿರೋಧಿ ಹೇಳಿಕೆ ಅಮಿತ್ ಷಾ ವಿರುದ್ಧ ಪ್ರತಿಭಟನೆ
ಮಂಜೇಶ್ವರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರನ್ನು ಅಪಮಾನಿಸಿದ ಕೇಂದ್ರ ಗೃಹಸಚಿವ ಅಮಿತ್ ಷಾರಿಗೆ ದೇಶದ ಸಂವಿಧಾನದಲ್ಲಿ ನಂಬಿಕೆಯಿಟ್ಟು ಬಾಳುವ ಜನತೆಯ ಬಗ್ಗೆ ಅಸಹನೆ ಇರುವುದು ಸ್ಪಷ್ಟವಾಗಿದೆ. ದೇಶದ ಕೋಟ್ಯಂತರ ಜನತೆಗೆ ಗೌರವದ ಬದುಕು, ಸಮಾನ ಹಕ್ಕುಗಳನ್ನು ಖಾತರಿಪಡಿಸಿದ ಭಾರತದ ಸಂವಿಧಾನವನ್ನು ಸಂರಕ್ಷಿಸಲು ಮತ್ತು ಅಂಬೇಡ್ಕರ್ ರನ್ನು ಅಪಮಾನಿಸಿದವರನ್ನು ಜನತಾ ವಿಚಾರಣೆ ನಡೆಸಲು ಕಾಂಗ್ರೆಸ್ ಪ್ರತಿಜ್ಞಾ ಬದ್ಧವಾಗಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ.
ವರ್ಕಾಡಿ ಮಂಡಲ ಕಾಂಗ್ರೆಸ್ ಆಯೋಜಿಸಿದ ಪ್ರತಿಭಟನಾ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಅರಿಬೈಲ್ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಉಮ್ಮರ್ ಬೋರ್ಕಳ, ಖಲೀಲ್ ಬಜಾಲ್, ಫ್ರಾನ್ಸಿಸ್ ಡಿ’ಸೋಜಾ, ಮೊಹಮ್ಮದ್ ಮಜಾಲ್, ಶಾಂತಾ ಆರ್ ನಾಯ್ಕ್, ಅಜೀಜ್ ಕಲ್ಲೂರು, ವಿನೋದ್ ಪಾವೂರು, ಸದಾಶಿವ ಕೆ, ಬಾಸಿತ್ ತಲೆಕ್ಕಿ, ಎಲಿಯಾಸ್ ಡಿಸೋಜಾ, ಮಹಮೂದ್ ಕೆದುಂಬಾಡಿ, ಅಬೂಬಕ್ಕರ್ ಪೊಯ್ಯೆ, ಅಬೂಬಕ್ಕರ್ ಕೆ ಎಚ್, ಚಂದ್ರಶೇಖರ ಅರಿಬೈಲ್, ವಿಕ್ಟರ್ ವೇಗಸ್, ಅಶ್ರಫ್ ಆನೆಕಲ್ಲು, ಟಿ ಎಂ.ಮೊಯ್ದಿನ್, ಅಶ್ರಫ್ ಕತ್ತರಿಕೋಡಿ, ಮುಹಮ್ಮದ್ ಬೊಳ್ಮಾರ್, ಖಾಲಿದ್ ಆನೆಕಲ್ಲು ಉಪಸ್ಥಿತರಿದ್ದರು. ಗಣೇಶ್ ಪಾವೂರು ಸ್ವಾಗತಿಸಿ, ಎ.ಎಂ ಉಮ್ಮರ್ ಕುಂಞÂ ವಂದಿಸಿದರು.