ಅಡ್ಕ ಶ್ರೀ ಐವರ್ ಭಗವತೀ ಕ್ಷೇತ್ರದಲ್ಲಿ ಒತ್ತೆಕೋಲ ಕೆಂಡಸೇವೆ ನಾಳೆ

ಉಪ್ಪಳ: ಅಡ್ಕ ಶ್ರೀ ಐವರ್ ಭಗವತೀ ಕ್ಷೇತ್ರ ಅಡ್ಕ ಮಂಗಲ್ಪಾಡಿ ಇಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ ನಾಳೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪೂರ್ವಾಹ್ನ 8ಕ್ಕೆ ಮೇಲೇರಿ ಕೂಡಿಸುವುದು, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 7.30ಕ್ಕೆ ಭಂಡಾರ ಆರೋಹಣ, ರಾತ್ರಿ 8.30ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, 9ರಿಂದ ಅನ್ನಸಂತರ್ಪಣೆ, 9.15ರಿಂದ ಊರ ಮಕ್ಕಳ ಕುಣಿತ ಭಜನೆ, 11ಕ್ಕೆ ಕುಳಿಚ್ಚಾಟಂ, ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ರಾತ್ರಿ 1 ಗಂಟೆಗೆ ಶಾರದಾ ಆರ್ಟ್್ಸ ಕಲಾವಿದರು ಮಂಜೇಶ್ವರ ಅಭಿನಯದ “ಕಥೆ ಎಡ್ಡೆಂಡು” ನಾಟಕ ಪ್ರದರ್ಶನ, 6ರಂದು ಪ್ರಾತಕಾಲ 4ಕ್ಕೆ ಕೆಂಡಸೇವೆ, 8.30ಕ್ಕೆ ಭಂಡಾರ ನಿರ್ಗಮನ ನಡೆಯಲಿದೆ.

RELATED NEWS

You cannot copy contents of this page