ಅತೀ ಹೆಚ್ಚು ಕಾಲ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದು ಇ.ಕೆ. ನಾಯನಾರ್

ತಿರುವನಂತಪುರ: ಅತೀ ಹೆಚ್ಚು ಕಾಲ ಕೇರಳ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಸರು ಸಿಪಿಎಂ (ಎಡರಂಗ)ದ ಇ.ಕೆ. ನಾಯನಾರ್ರ ಹೆಸರಲ್ಲಿ ಇನ್ನೂ ಮುಂದುವರಿಯುತ್ತಿದೆ. ಇವರು ಮೂರು ಬಾರಿ ಕೇರಳ ಮುಖ್ಯಮಂತ್ರಿಯಾಗಿದ್ದು ಆ ಸ್ಥಾನದಲ್ಲಿ ಒಟ್ಟು 4009 ದಿನಗಳ ಕಾಲ ಮುಂದುವರಿದಿದ್ದಾರೆ.
ಇನ್ನು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಹಾಲಿ ಮುಖ್ಯಮಂತ್ರಿ (ಎಡರಂಗ)ದ ಪಿಣರಾಯಿ ವಿಜಯನ್ 3250ಕ್ಕಿಂತಲೂ ಹೆಚ್ಚು ದಿನ ಪೂರೈಸಿದ್ದು, ಆ ಸ್ಥಾನದಲ್ಲಿ ಇನ್ನೂ ಮುಂದುವರಿಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾದ ಕೆ. ಕರುಣಾಕರನ್ (ಕಾಂಗ್ರೆಸ್)- 3246 ದಿನ, ಎರಡು ಬಾರಿ ಮುಖ್ಯಮಂತ್ರಿಯಾದ ಸಿ. ಅಚ್ಯುತ ಮೆನೋನ್ (ಎಡರಂಗ), 2640 ದಿನಗಳ ಅನುಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ. ಇವರ ಹೊರತಾಗಿ ಎರಡು ಬಾರಿ ಮುಖ್ಯಮಂತ್ರಿಯಾದ ದಿ| ಉಮ್ಮನ್ ಚಾಂಡಿ (ಕಾಂಗ್ರೆಸ್) 2459 ದಿನಗಳು, ಮೂರು ಬಾರಿ ಮುಖ್ಯಮಂತ್ರಿಯಾದ ಎ.ಕೆ. ಆಂಟನಿ (ಕಾಂಗ್ರೆಸ್) 2177 ದಿನಗಳು, ನಂತರ ವಿ.ಎಸ್. ಅಚ್ಯುತಾನಂದನ್ (ಎಡರಂಗ)- 1818 ದಿನಗಳು, ಪಟ್ಟಂ ತಾನು ಪಿಳ್ಳೆ 942 ದಿನಗಳು, ಆರ್. ಶಂಕರ್ 715 ದಿನಗಳು, ಪಿ.ಕೆ. ವಾಸುದೇವನ್ ನಾಯರ್ 348 ದಿನಗಳು ಹಾಗೂ ಸಿ.ಎಚ್. ಮೊಹಮ್ಮದ್ ಕೋಯ (ಮುಸ್ಲಿಂ ಲೀಗ್), 54 ದಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

You cannot copy contents of this page