ಅನಂತಪುರದಲ್ಲಿ ಭಾರೀ ಬೆಂಕಿ ಆಕಸ್ಮಿಕ: ತಪ್ಪಿದ ದುರಂತ

ಕುಂಬಳೆ: ಅನಂತಪುರದಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ. ಅನಂತಪುರ ಕ್ಷೇತ್ರ ಸಮೀಪದ ೨೦ ಎಕರೆಯಷ್ಟು ಸ್ಥಳದಲ್ಲಿ ಬೆಂಕಿ ಹತ್ತಿಕೊಂಡಿದೆ. ಬಹುಬೇಗನೆ ಹರಡಿದ ಬೆಂಕಿಯಿಂದ ನಾಗರಿಕರು ಆತಂಕಗೊಂಡರು. ಅನಂತಪುರ ಕ್ಷೇತ್ರ ಸಂದರ್ಶನಕ್ಕಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಲುಪಲಿರುವಂತೆಯೇ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಗೋವಾ ಮುಖ್ಯಮಂತ್ರಿಯ ಭದ್ರತೆಗೆ ತಲುಪಿದ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ಸಹಿತ ನಾಗರಿಕರು ಬೆಂಕಿ ನಂದಿಸಲು ಪ್ರಯತ್ನ ಮುಂದುವರಿಸಿದ್ದಾರೆ. ಅಗ್ನಿಶಾಮಕದಳವೂ ಸ್ಥಳಕ್ಕೆ ತಲುಪಿದೆ. ಇಂದು ಮಧ್ಯಾಹ್ನ ವೇಳೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಬೆಂಕಿ ಆಕಸ್ಮಿಕ ಕೈಗಾರಿಕಾ ಎಸ್ಟೇಟ್‌ನ ಮುಂಭಾಗಕ್ಕಾಗಿರುವುದರಿಂದ ಭಾರೀ ದುರಂತ ತಪ್ಪಿಹೋಗಿದೆ.

You cannot copy contents of this page