ಕುಂಬಳೆ: ಅನಧಿಕೃತವಾಗಿ ಸಾಗಿಸುತ್ತಿದ್ದ ಒಂದು ಲೋಡ್ ಹೊಯ್ಗೆಯನ್ನು ಕುಂಬಳೆ ಎಸ್ಐ ಗಣೇಶ್ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಟಿಪ್ಪರ್ ಲಾರಿ ಚಾಲಕ ಮೊಗ್ರಾಲ್ ಕೆ.ಕೆ ಪುರದ ಮೊಹಮ್ಮದ್ ನೌಶಾದ್ (೨೧) ವಿರುದ್ಧ ಕೇಸು ದಾಖಲಿಸಲಾಗಿದೆ. ಕೆ.ಕೆ. ಪುರದ ಅನಧಿಕೃತ ಕಡವಿನಿಂದ ಹೊಯ್ಗೆ ಸಾಗಿಸಲಾಗುತ್ತಿತ್ತೆನ್ನಲಾಗಿದೆ.