ಅನಧಿಕೃತ ಹೊಯ್ಗೆ ಸಂಗ್ರಹ: ದೋಣಿ ನಾಶ

ಕುಂಬಳೆ: ಅನಧಿಕೃತವಾಗಿ ಹೊಳೆಗಳಿಂದ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವ ದಂಧೆ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದಲ್ಲಿ  ಪೊಲೀಸರು ನಿನ್ನೆ ರಾತ್ರಿ 11 ಗಂಟೆ ವೇಳೆ ಶಿರಿಯ ವಳಯಂ ಕಡವಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿ ಹೊಯ್ಗೆ ಸಂಗ್ರಹಿಸಲು  ಬಳಸುತ್ತಿದ್ದ ದೋಣಿಯೊಂದು ಪತ್ತೆಯಾಗಿದ್ದು, ಅದನ್ನು ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ. ಅಲ್ಲದೆ ಅಲ್ಲಿ ಸಂಗ್ರಹಿಸಿಟ್ಟಿದ್ದ 15 ಲೋಡ್ ಹೊಯ್ಗೆಯನ್ನು ಹೊಳೆಗೆ  ಸುರಿಯಲಾಯಿತು. ಎಸ್‌ಐ ಕೆ. ಶ್ರೀಜೇಶ್, ಎಎಸ್‌ಐ ಪ್ರದೀಪ್ ಎಂಬಿವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

You cannot copy contents of this page