ಮಂಜೇಶ್ವರ: ಕಳಾಯಿ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿ ಚಾಲಕನನ್ನು ಬಂಧಿಸಿದ್ದಾರೆ. ಬಡಾಜೆ ಕನಿಲ ನಿವಾಸಿ ಶೇಕ್ ಅಬ್ದುಲ್ಲ (31) ಬಂಧಿತ ಲಾರಿ ಚಾಲಕನಾಗಿದ್ದಾನೆ. ಮಂಜೇಶ್ವರ ಎಸ್‌ಐ ರಾಜನ್ ನೇತೃತ್ವದಲ್ಲಿ ಪೊಲೀಸರು ನಿನ್ನೆ ಬಾಯಿಕಟ್ಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನಧಿಕೃತವಾಗಿ ಹೊಯ್ಗೆ ಸಹಿತ ಲಾರಿ ತಲುಪಿತ್ತು.
