ಅನರ್ಹವಾಗಿ ಸಾಮಾಜಿಕ ಪಿಂಚಣಿ ಪಡೆದ ಸರಕಾರಿ ಸಿಬ್ಬಂದಿಗಳ ವಿರುದ್ಧ ಕ್ರಮ ಆರಂಭ: ಕಾಸರಗೋಡಿನ ಓರ್ವ ಸೇರಿದಂತೆ ಆರು ಮಂದಿಯ ಅಮಾನತು
ತಿರುವನಂತಪುರ: ಬಡ ಕುಟುಂಬಕ್ಕೆ ಸೇರಿದ ಹಿರಿಯ ನಾಗರಿಕರಿಗೆ ವಿತರಿಸಲಾಗುವ ಸಾಮಾಜಿಕ ಕಲ್ಯಾಣ ಪಿಂಚಣಿಯನ್ನು ಅನರ್ಹವಾಗಿ ಪಡೆದ ಸರಕಾರಿ ಸಿಬ್ಬಂದಿಗಳ ವಿರುದ್ದ ರಾಜ್ಯ ಹಣಕಾಸು ಇಲಾಖೆ ಕ್ರಮ ಆರಂಭಿಸಿದೆ. ಇದರಂತೆ ಅನರ್ಹವಾಗಿ ಕಲ್ಯಾಣ ಪಿಂಚಣಿ ಪಡೆಯುತ್ತಿದ್ದ ಮಣ್ಣು ಸಂg ಕ್ಷಣಾ ಇಲಾಖೆಯ ಕಾಸರಗೋಡಿನ ಓರ್ವ ಸಿಬ್ಬಂದಿಯೂ ಸೇರಿದಂತೆ ಆರು ಮಂದಿಯನ್ನು ತನಿಖಾ ವಿಧೇಯ ಗೊಳಿಸಿ ಸೇವೆಯಿಂದ ಅಮಾನತುಗೊಳಿ ಸಲಾಗಿದೆ. ಹೀಗೆ ಅಮಾನತುಗೊಳಿಸಲ್ಪ ಟ್ಟವರಲ್ಲಿ ಕೃಷಿ ಇಲಾಖೆಗೊಳಪಟ್ಟ ಪತ್ತನಂತಿಟ್ಟ ಮಣ್ಣು ಸಂರಕ್ಷಣಾ ಕಚೇರಿಯ ಪಾರ್ಟ್‌ಟೈಂ ಸ್ವೀಪರ್, ವಡಗರೆ ಮಣ್ಣು ಸಂರಕ್ಷಣಾ ಕಚೇರಿಯ ವರ್ಕ್ ಸುಪರಿನ್ ಟೆಂಡೆಂಟ್, ಮೀನಂಗಾಡಿ ಮಣ್ಣು ಸಂರಕ್ಷಣಾ ಕಚೇರಿಯ ಪಾರ್ಟ್‌ಟೈಂ ಸ್ವೀಪರ್, ಮೀನಂಗಾಡಿ ಮಣ್ಣು ಸಂಶೋಧನಾ ಅಸಿಸ್ಟೆಂಟ್ ಡೈರೆಕ್ಟರ್ ಕಚೇರಿಯ ಪಾರ್ಟ್ ಟೈಂ ಸ್ವೀಪರ್ ಮತ್ತು ತಿರುವ ನಂತಪುರ ಸೆಂಟ್ರಲ್ ಸೋಯಿಲ್ ಅನಲಿಟಿಕಲ್ ಲ್ಯಾಬ್‌ನ ಓರ್ವ ಪಾರ್ಟ್ ಟೈಂ ಸ್ವೀಪರ್ ಒಳಗೊಂಡಿ ದ್ದಾರೆ. ಅನಧಿಕೃತವಾಗಿ ಪಿಂಚಣಿ ಪಡೆಯುತ್ತಿದ್ದ ಕಚೇರಿಯ ಸಿಬ್ಬಂದಿಗಳ ಮಾಹಿತಿಯನ್ನು ಹಣಕಾಸು ಇಲಾಖೆ ಈ ಹಿಂದೆಯೇ ಕೃಷಿ ಇಲಾಖೆಗೆ ಹಸ್ತಾಂ ತರಿಸಿತ್ತು. ಅದರಂತೆ ಅವರ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ.
ಹೀಗೆ ಅನಧಿಕೃತವಾಗಿ ಕಲ್ಯಾಣ ಪಿಂಚಣಿ ಪಡೆದವರಿಂದ ಆ ಮೊತ್ತವನ್ನು ಶೇಕಡಾ 18ರಷ್ಟು ಬಡ್ಡಿದರ ಸಹಿತ ಮರುವಸೂಲಿ ಮಾಡುವ ಕ್ರಮವನ್ನೂ ಹಣಕಾಸು ಇಲಾಖೆ ಇನ್ನೊಂದೆಡೆ ಆರಂಭಿಸಿದೆ. ಗಜೆಟೆಡ್ ಅಧಿಕಾರಿಗಳೂ ಸೇರಿದಂತೆ 1458 ಸರಕಾರಿ ಸಿಬ್ಬಂದಿಗಳು ಅನಧಿಕೃತವಾಗಿ ಸಾಮಾಜಿಕ ಪಿಂಚಣಿ ಪಡೆಯುತ್ತಿರುವುದಾಗಿ ಹಣಕಾಸು ಇಲಾಖೆ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ.