ಅಪಘಾತದಲ್ಲಿ ಗಾಯಗೊಂಡಿದ್ದ ಗೃಹಿಣಿ ಮೃತ್ಯು
ಕಾಸರಗೋಡು: ಆರು ತಿಂಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಗೃಹಿಣಿ ನಿಧನ ಹೊಂದಿದರು. ಪೊವ್ವಲ್ ಬಾಡಿಗೆ ಮನೆಯಲ್ಲಿ ವಾಸಿ ಸುತ್ತಿದ್ದ ಸಾರಾ (50) ಮೃತಪಟ್ಟವರು. ಜನವರಿ ೧೭ರಂದು ಮೊಮ್ಮಗನೊಂ ದಿಗೆ ಪ್ರಯಾಣಿಸುತ್ತಿದ್ದ ವೇಳೆ ಮಾಸ್ತಿ ಕುಂಡ್‌ನಲ್ಲಿ ಇವರಿಬ್ಬರಿಗೂ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಸಾರಾ ಹಾಗೂ ಮಗು ಗಾಯಗೊಂಡಿತ್ತು.
ಗಂಭೀರ ಸ್ಥಿತಿಯಲ್ಲಿದ್ದ ಸಾರಾ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾರೆ. ಕಾಸ ರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಚೆಡೇಕ್ಕಲ್ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮೃತರು ಪತಿ ಹಂಸ, ಮಕ್ಕಳಾದ ಶಮ್ಲತ್, ಫಸೀಲ, ಅಳಿಯಂದಿರಾದ ರಂಶೀದ್, ಶಫೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.