ಅಪ್ರಾಪ್ತರು ವಾಹನ ಚಲಾಯಿಸಿದಲ್ಲಿ 30,000 ರೂ ಜುಲ್ಮಾನೆ; ಆರ್.ಸಿ ಮಾಲಕರ ವಿರುದ್ಧ ಕೇಸು
ಕಾಸರಗೋಡು: ಹದಿನೆಂಟಕ್ಕಿಂತ ಕೆಳಪ್ರಾಯದವರು ವಾಹನ ಚಲಾಯಿಸಿದಲ್ಲಿ ಇನ್ನು 30,000 ರೂ. ತನಕ ಜುಲ್ಮಾನೆ ವಿಧಿಸಲಾಗುವುದಲ್ಲದೆ ಅಂತಹ ವಾಹನಗಳ ಆರ್.ಸಿ ಮಾಲಕರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸಿ ಅದರಿಂದ ಅಪಘಾತ ಉಂಟಾಗುತ್ತಿರುವ ಘಟನೆಗಳು ರಾಜ್ಯದಲ್ಲಿ ಇತ್ತೀಚೆಗಿನಿಂದ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಲು ಪೊಲೀಸರು ಮಾತ್ರವಲ್ಲ ಮೋಟಾರು ವಾಹನ ಇಲಾಖೆಯೂ ಕಠಿಣ ಕ್ರಮ ಆರಂಭಿಸಿದೆ. ಇದ ರಂತೆ ಕಾಸರಗೋಡು ಜಿಲ್ಲೆಯಲ್ಲ್ಲಿ ಪೊಲೀಸರು ಇಂತಹ ಕಾರ್ಯಾಚರ ಣೆಯನ್ನು ನಿನ್ನೆಯಿಂದ ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಶಾಲಾ ವಿದ್ಯಾರ್ಥಿಗಳು ದ್ವಿಚಕ್ರವಾಹನ ಚಲಾಯಿಸುವುದು ಇತ್ತೀಚೆಗೆ ಹೆಚ್ಚಾಗತೊಡಗಿದೆ. ಅಂತಹ ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಜುಲ್ಮಾನೆ ಕ್ರಮ ಕೈಗೊಳ್ಳುತ್ತಿದ್ದಾರೆ. ಮಾತ್ರವಲ್ಲ ಆರ್.ಸಿ ಮಾಲಕನ ವಿರುದ್ಧ ಕೇಸು ದಾಖಲಿಸುವ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ.
ಆದ್ದರಿಂದ ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ನೀಡುವವರು ಜಾಗ್ರತೆ ಪಾಲಿಸಬೇಕಾಗಿದೆ. ಇಲ್ಲವಾದಲ್ಲಿ ಅವರು ಕಠಿಣ ಕಾನೂನುಕ್ರಮ ಎದುರಿಸಬೇಕಾಗಿಬರಲಿದೆಯೆಂಬ ಮುನ್ನೆಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.