ಅಭಿವೃದ್ಧಿ ಯೋಜನೆಯಲ್ಲಿ ರಾಜಕೀಯ ತೋರಲ್ಲ- ಸಚಿವ ಗಡ್ಕರಿ
ಕಾಸರಗೋಡು: ಅಭಿವೃದ್ಧಿ ಯೋಜನೆಯಲ್ಲಿ ರಾಜಕೀಯ ಬೇದ ಬಾವ ತೋರುವುದಿಲ್ಲವೆಂದು ಕೇಂದ್ರ ಭೂ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೇರಳದಲ್ಲಿ ಪೂರ್ತೀಕರಿಸಲಾದ ಒಂಭತ್ತು ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ೧೨ ಹೊಸ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನಡೆಸಿ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಿನ್ನೆ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡುತ್ತಿದ್ದರು.
ನಿಗದಿತ ಕಾರ್ಯಕ್ರಮದಂತೆ ಸಚಿವರು ಮುಂಬೈಯಿಂದ ನಿನ್ನೆ ಕಾಸರಗೋಡಿಗೆ ಬರಬೇಕಾಗಿತ್ತು. ಆದರೆ ಅವರು ಮುಂಬೈಯಿಂದ ಬರಬೇಕಾಗಿದ್ದ ವಿಮಾನದಲ್ಲಿ ಕೆಲವೊಂದು ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೆ ಕಾಸರಗೋಡಿಗೆ ಬರಲು ಸಾಧ್ಯವಾಗದೆ ಕಾರ್ಯ ಕ್ರಮವನ್ನು ಬಳಿಕ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಬೇಕಾಗಿ ಬಂತು. ಅವರು ಮಾತ್ರವಲ್ಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದ ಕೇಂದ್ರ ಸಚಿವ ವಿ. ಮುರಳೀಧರನ್ ಮತ್ತು ರಾಜ್ಯ ಲೋಕೋಪಯೋಗಿ ಖಾತೆ ಸಚಿವ ಮೊಹಮ್ಮದ್ ರಿಯಾಸ್ ಕೂಡಾ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸದೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ಅವರು ಮಾತನಾಡಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕಾಣಲು ಕಾರ್ಯಕ್ರಮ ನಡೆದ ತಾಳಿಪಡ್ಪು ಮೈದಾನಿಗೆ ಭಾರೀ ಜನರು ಬಂದು ಸೇರಿದ್ದರು. ಆದರೆ ಸಚಿವರುಗಳು ಕಾರ್ಯಕ್ರಮವನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸುವ ವಿಷಯ ತಿಳಿದ ಹೆಚ್ಚಿನವರು ಭಾರೀ ನಿರಾಸೆಗೊಂಡು ಅಲ್ಲಿಂದ ಹಿಂತಿರುಗಿದರು. ಕೇಂದ್ರ ಸಚಿವರು ನಿನ್ನೆ ಉದ್ಘಾಟಿಸಿದ ಯೋಜನೆಯಲ್ಲಿ ೮೪.೪೬ ಕೋಟಿ ರೂ. ವೆಚ್ಚದಲ್ಲಿ ನೀಲೇಶ್ವರ- ಪಳ್ಳಿಕ್ಕೆರೆ ರೈಲ್ವೇ ಮೇಲ್ಸೇತು ವೆಯೂ ಒಳಗೊಂಡಿದೆ. ಮೂನಾರಿನಲ್ಲಿ ನಡೆದ ಕಾರ್ಯ ಕ್ರಮವನ್ನೂ ಸಚಿವರು ವೀಡಿಯೋ ಕಾನ್ಫರೆನ್ಸಿಂಗ್ ಮೂಲ ಕವೇ ಇಲ್ಲಿಂದ ಉದ್ಘಾಟಿಸಿದರು.