ಅಮೇರಿಕಾ ಮಾಜಿ ಅಧ್ಯಕ್ಷ ಟ್ರಂಪ್ ಮೇಲಿನ ದಾಳಿಯ ಹೊಣೆಗಾರಿಕೆ ವಹಿಸಿಕೊಂಡ ಎನ್ಆರ್ಎಫ್ ಭಯೋತ್ಪಾದಕರು
ನವದೆಹಲಿ: ಅಮೇರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ನಾಯಕ ಮತ್ತು ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ರ ಮೇಲೆ ದಾಳಿ ನಡೆಸಿ ಅವರ ಹತ್ಯೆಗೆ ಯತ್ನಿಸಿದ ಹೊಣೆಗಾರಿಕೆ ಯನ್ನು ಅಪಘಾನಿಸ್ಥಾನದ ಭಯೋ ತ್ಪಾದಕ ಸಂಘಟನೆಯಾದ ಎನ್ಆರ್ಎಫ್ (ನೇಶನಲ್ ರೆಸಿಸ್ಟನ್ಸ್ ಫೋರ್ಸ್) ವಹಿಸಿಕೊಂ ಡಿದೆ. ಈ ಸಂಘಟನೆಯ ಕಮಾಂಡರ್ ಎಂದು ಹೇಳುತ್ತಿರುವ ವ್ಯಕ್ತಿ ವೀಡಿಯೋವೊಂz ನ್ನು ಬಿಡುಗಡೆಮಾಡಿ ಟ್ರಂಪ್ ಮೇಲಿನ ದಾಳಿಯ ಜವಾಬ್ದಾರಿ ವಹಿಸಿಕೊಂಡಿ ದ್ದಾನೆ. ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ಎನ್ಆರ್ಎಫ್ನ ಕಮಾಂ ಡರ್ ಎಂದು ಹೇಳುವ ಅಜ್ಮಲ್ ಮತ್ತು ಮುಖವಾಡ ಧರಿಸಿರುವ ಇನ್ನೋರ್ವ ವ್ಯಕ್ತಿ ವೀಡಿಯೋ ದೃಶ್ಯದಲ್ಲಿ ಕಾಣಿಸಿಕೊಂಡಿದೆ. ಇಬ್ಬರೂ ಕೈಯಲ್ಲಿ ಮಾರಕಾಸ್ತ್ರ ಹಿಡಿದಿದ್ದಾರೆ. ಎನ್ಆರ್ಎಫ್ ನಾಯಕ ಅಹಮ್ಮದ್ ಮಸೂದ್ನ ಆದೇಶದ ಮೇರೆಗೆ ಟ್ರಂಪ್ ಮೇಲೆ ದಾಳಿ ನಡೆಸಲಾಗಿದೆ. ತಾಲಿಬಾನ್ ವಿರೋಧ ಪ್ರತಿರೋಧ ಗುಂಪಿನ ಕಮಾಂಡರ್ ಎಂದು ಹೇಳಲಾದ ಈತ ಕೇವಲ ಟ್ರಂಪ್ ಮಾತ್ರವಲ್ಲ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಮತ್ತು ಇತರ ಅಮೇರಿಕಾದ ನಾಯಕರನ್ನು ಗುರಿಯಾಗಿ ರಿಸಿರುವುದಾಗಿ ಹೇಳಿದ್ದಾನೆ.
ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವಾದ ಅಮೇರಿಕಾದ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಟ್ರಂಪ್ರ ಹತ್ಯೆಯನ್ನು ಇಡೀ ಜಗತ್ತೇ ಬೆಚ್ಚಿ ಬೀಳಿಸಿದೆ. ಅಮೇರಿಕಾದ ಚಿಕಾಗೋದಲ್ಲಿ ಚುನಾವಣಾ ಪ್ರಚಾರದ ವೇಳೆ ಮೊನ್ನೆ ಗುಂಡಿನ ದಾಳಿ ನಡೆಸಿ ಟ್ರಂಪ್ರ ಹತ್ಯೆಯತ್ನ ನಡೆಸಲಾಗಿತ್ತು. ದಾಳಿಕೋರ ೨೦ ವರ್ಷದ ವಿದ್ಯಾರ್ಥಿ ಮಾಠೋ ಕ್ರೂಕ್ಸ್ರನ್ನು ಭಾರತೀಯ ಪಡೆಗಳು ಕೂಡಲೇ ಹೊಡೆದು ರುಳಿಸಿದ್ದಾರೆ.