ಅಮೈ ಶ್ರೀಕೃಷ್ಣ ಭಜನಾಮಂದಿರ ಸಮಿತಿ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ಕಾಸರಗೋಡು: ಅಮೈ ಶ್ರೀಕೃಷ್ಣ ಭಜನಾಮಂದಿರ ಸಮಿತಿಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮಂದಿರದಲ್ಲಿ ಜರಗಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಭಜನಾ ಮಂದಿರ ಸಮಿತಿಗೆ ಗೌರವಾಧ್ಯಕ್ಷರಾಗಿ ಗಂಗಾಧರ, ಅಧ್ಯಕ್ಷರಾಗಿ ಗುಣಪಾಲ ಅಮೈ, ಉಪಾಧ್ಯಕ್ಷರಾಗಿ ಪುಷ್ಪಾವತಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ, ಜೊತೆ ಕಾರ್ಯದರ್ಶಿ ಯಾಗಿ ರಾಜೇಶ್ ಅಮೈ, ಕೋಶಾಧಿಕಾರಿಯಾಗಿ ಮನೋಹರ ಹಾಗೂ ಶ್ರೀಕೃಷ್ಣ ಗೆಳೆಯರ ಬಳಗ ಸಮಿತಿಗೆ ಅಧ್ಯಕ್ಷರಾಗಿ ಲತೇಶ್, ಉಪಾಧ್ಯಕ್ಷರಾಗಿ ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಮುರಳೀಧರ, ಜೊತೆ ಕಾರ್ಯದರ್ಶಿಯಾಗಿ ಯೋಗೇಶ್, ಕೋಶಾಧಿಕಾರಿಯಾಗಿ ಶೋಭಿತ್ ಆಯ್ಕೆಯಾದರು.
ವಾರ್ಷಿಕ ಮಹಾಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ, ಜೊತೆಕಾರ್ಯದರ್ಶಿ ರಾಜೇಶ್ ಅಮೈ ವಂದಿಸಿದರು.