ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠೆ: ಐಲ ತರುಣ ಕಲಾವೃಂದದ ಆಶ್ರಯದಲ್ಲಿ ಸಂಭ್ರಮಾಚರಣೆ ೨೨ರಂದು

ಉಪ್ಪಳ: ಅಯೋದೆs್ಯಯ ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀರಾಮನ ದಿವ್ಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಪ್ರಯುಕ್ತ ಐಲ ತರುಣ ಕಲಾವೃಂದ ಇದರ ಆಶ್ರಯದಲ್ಲಿ ಐಲ ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದ ವಠಾರದಲ್ಲಿ ವಿಶೇಷ ದೀಪಾಲಂಕಾರದೊAದಿಗೆ ಸಂಭಮಾಚರಣೆ ಜ.22ರಂದು ಸಂಜೆ 5.30ರಿಂದ ನಡೆಯಲಿದೆ. ಅಖಿಲ ಭಾರತ ಕುಟುಂಬ ಪ್ರಭೋದಿನಿ ಕಾರ್ಯಕಾರಿ ಸಮಿತಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸತ್ಸಂಗ ನಡೆಸುವರು. ಖ್ಯಾತ ನಟ, ನಿರ್ದೇಶಕ ಕಾಸರಗೋಡು ಚಿನ್ನಾ, ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ಉಪಸ್ಥಿತರಿರುವರು. ಬಳಿಕ ಗಾಯಕ ರವೀಂದ್ರ ಪ್ರಭು ಮತ್ತು ಬಳಗದವರಿಂದ ಭಕ್ತಿಗೀತೆ ನಡೆಯಲಿದೆ.

You cannot copy contents of this page