ಅವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ವಿರುದ್ಧ  ಸ್ಕ್ವಾಡ್‌ನಿಂದ ದಂಡ ವಸೂಲಿ

ಕಾಸರಗೋಡು:  ನಗರಸಭೆ ವ್ಯಾಪ್ತಿಯ ಕೋಟೆಕಣಿ ರಸ್ತೆಬದಿಯ ದ್ವಿ ಮಹಡಿ ಕಟ್ಟಡದಿಂದಿರುವ ಜೈವಿಕ-ಅಜೈವಿಕ ತ್ಯಾಜ್ಯವನ್ನು ಕಟ್ಟಡದ ಹಿಂಬದಿಯಲ್ಲಿ ರಾಶಿ ಹಾಕಿ ಪರಿಸರ ಹಾನಿಗೊಳಿಸಿರುವುದಕ್ಕೆ ಕಟ್ಟಡ ಮಾಲಕನಿಗೆ 5 ಸಾವಿರ ರೂ . ದಂಡ ಹೇರಲಾಯಿತು. ಕಾಂಪ್ಲೆಕ್ಸ್‌ನ ಒಳಗಿರುವ ಇಲೆಕ್ಟ್ರಿಕಲ್ಸ್, ಸ್ಟೋರ್ ಎಂಬೀ ಸಂಸ್ಥೆಗಳ ಮಾಲಕರಿಗೂ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಉಪೇಕ್ಷಿಸಿರುವುದಕ್ಕೆ ೫ ಸಾವಿರ ರೂ.ನಂತೆ ದಂಡ ಹಾಕಲಾಗಿದೆ. ವಿದ್ಯಾನಗರದ ಗೂಡಂಗಡಿಯಿಂದಿ ರುವ ತ್ಯಾಜ್ಯವನ್ನು ನಿರ್ಲಕ್ಷ್ಯವಾಗಿ ಉಪೇಕ್ಷಿಸಿರುವುದಕ್ಕೆ ಮಾಲಕನಿಂದ ೩ ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.  ತಪಾಸಣೆಯಲ್ಲಿ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ.ಮೊಹಮ್ಮದ್ ಮದನಿ, ಸದಸ್ಯ ಶೈಲೇಶ್ ಟಿ.ಸಿ, ಪಬ್ಲಿಕ್ ಹೆಲ್ತ್ ಇನ್‌ಸ್ಪೆಕ್ಟರ್‌ಗಳಾದ ರಚನಾ ಕೆ.ಪಿ, ಐಶ್ವರ್ಯ ಪಿ.ಪಿ, ದಿವ್ಯಶ್ರೀ ವಿ.ಪಿ, ಜಲೇಶ್ ಕೆ ಭಾಗವಹಿಸಿದರು.

RELATED NEWS

You cannot copy contents of this page