ಅಸೌಖ್ಯ: ಯುವಕ ನಿಧನ

ಪೆರ್ಲ: ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದ ಸೇರಾಜೆ ನಿವಾಸಿ, ಕೂಲಿ ಕಾರ್ಮಿಕ ಸತೀಶ (೪೦) ನಿಧನಹೊಂದಿದರು. ಕಳೆದ ಕೆಲವು ದಿನಗಳಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು, ಮೊನ್ನೆ ರೋಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಕಣ್ಣೂರು ಪರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಅವರ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಅವಿವಾಹಿತರಾದ ಮೃತರ ತಂದೆ ಮಾಣಿ, ತಾಯಿ ಕಮಲಾ ಈ ಹಿಂದೆ ನಿಧನಹೊಂದಿದ್ದಾರೆ.

ಮೃತರು ಸಹೋದರ ಗಣೇಶ, ಸಹೋದರಿಯರಾದ ಶಕೀಲಾ, ಸುಶೀಲಾ, ಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ‘ಕಾರವಲ್’ ಪತ್ರಿಕೆಯ ತುಳು ವಿಭಾಗದಲ್ಲಿ ಇವರ  ಕಥೆ ಪ್ರಕಟವಾಗಿತ್ತು.

ನಿಧನ  ಸುದ್ದಿ ತಿಳಿದು ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್, ವಾರ್ಡ್ ಪ್ರತಿನಿಧಿ ಉಷಾ ಗಣೇಶ್ ಮನೆಗೆ ತಲುಪಿ ಸಂತಾಪ ಸೂಚಿಸಿದ್ದಾರೆ. ನಿಧನಕ್ಕೆ ಶ್ರೀ ಸಿದ್ದಿವಿನಾಯಕ ಭಜನಾ ಸಮಿತಿ ಗೋಳಿತ್ತಾರು ಸಂತಾಪ ವ್ಯಕ್ತಪಡಿಸಿದೆ.

You cannot copy contents of this page