ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಲಾಟರಿ ಏಜೆಂಟ್ ನಿಧನ
ನೀರ್ಚಾಲು: ಕೊಲ್ಲಂಗಾನದ ಕ್ವಾರ್ಟರ್ಸ್‌ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಲಾಟರಿ ಏಜೆಂಟ್ ಮೃತಪಟ್ಟರು.
ಪಾಲಕ್ಕಾಡ್ ಪತ್ತಿಪಾಲಂ ನಿವಾಸಿ ಎನ್.ಟಿ. ಪ್ರಕಾಶನ್ (67) ಮೃತ ವ್ಯಕ್ತಿ. 12 ವರ್ಷಗಳಿಂದ ಕೊಲ್ಲಂಗಾನದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಇವರು ಲಾಟರಿ ಮಾರಾಟ ನಡೆಸುತ್ತ್ತಿದ್ದರು. ಕೆಲವು ತಿಂಗಳಿಂದ ಮಧುಮೇಹ ಸಂಬಂಧ ಚಿಕಿತ್ಸೆಯಲ್ಲಿದ್ದರು. ನಿನ್ನೆ ಬೆಳಿಗ್ಗೆ ಇವರು ಕ್ವಾರ್ಟರ್ಸ್‌ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಸ್ನೇಹಿತರು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರು. ರಾತ್ರಿ ವೇಳೆ ಪ್ರಕಾಶನ್ ನಿಧನಹೊಂದಿದರು. ಮೃತರು ಪತ್ನಿ ವತ್ಸಲ, ಪುತ್ರ ಪ್ರಸಾದ್, ಸಹೋದರ ರಾದ ಸಂತೋಷ್, ರವೀಂದ್ರನ್, ಸಹೋದರಿ ಕೋಮಳ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವುಕೇಸು ದಾಖಲಿಸಿಕೊಂಡಿದ್ದಾರೆ.