ಆನ್‌ಲೈನ್ ಮೂಲಕ ವಂಚನೆ: ಕಾಸರಗೋಡು ನಿವಾಸಿ ಸೆರೆ

ಕಾಸರಗೋಡು: ಆನ್‌ಲೈನ್ ವ್ಯಾಪಾರದಲ್ಲಿ ಲಾಭ ಗಿಟ್ಟಿಸಿಕೊಡು ವುದಾಗಿ ನಂಬಿಸಿ ಕಣ್ಣೂರು ನಿವಾಸಿಯೋರ್ವರ ೧.೮೦ ಲಕ್ಷ ರೂ. ಎಗರಿಸಿದ ಪ್ರಕರಣದ ಆರೋ ಪಿಯನ್ನು ಕಣ್ಣೂರು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಿವಾಸಿ ಅಬ್ದುಲ್ ಸಮದ್ ಬಂಧಿತನಾದ ಆರೋಪಿ. ಸೈಬರ್ ಸೆಲ್ ಪೊಲೀಸರ ತಂಡ ಈತನನ್ನು ಬಂಧಿಸಿದೆ. ವಂಚನೆ ಪ್ರಕರಣದಲ್ಲಿ ಆರೋಪಿಯಾದ ಬಳಿಕ ಈತ ವಿದೇಶಕ್ಕೆ ಪರಾರಿಯಾಗಿದ್ದನು. ಅಲ್ಲಿಂದ ಆತ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅದರಂತೆ ಆತನನ್ನು  ಪೊಲೀಸರು ಅಲ್ಲಿಂದ ಬಂಧಿಸಿದ್ದಾರೆ. ಬಂಧಿತನನ್ನು ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

You cannot copy contents of this page