ಆನ್‌ಲೈನ್ ವ್ಯಾಪಾರ: 33 ಲಕ್ಷ ರೂ. ಲಪಟಾಯಿಸಿದ ಕಾಸರಗೋಡು ನಿವಾಸಿಗಳ ಸಹಿತ 4 ಮಂದಿ ಉಡುಪಿಯಲ್ಲಿ ಸೆರೆ
ಮಂಗಳೂರು: ಆನ್‌ಲೈನ್ ವ್ಯಾಪಾರಕ್ಕೆ ಸಂಬಂಧಿಸಿ ವಂಚನೆ ನಡೆಸಿದ ಪ್ರಕರಣದಲ್ಲಿ ಕಾಸರಗೋಡು ನಿವಾ ಸಿಗಳ ಸಹಿತ ನಾಲ್ಕು ಮಂದಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ತಂಡದ ಕೈಯಿಂದ ಹಣ, ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ. ಕುಂಬಳೆ ನಿವಾಸಿ ಬಿ. ಖಾಲಿದ್ (39), ನೀರ್ಚಾಲು ನಿವಾಸಿ ಕೆ.ಎ. ಮುಹಮ್ಮದ್ ಸಫ್ವಾನ್ (22), ಮಂಗಳೂರು ಬಿಜೈಯ ಸತೀಶ್ ಶೆಟ್ಟಿ (22), ಪುತ್ತೂರು ಕುರಿಯದ ಪಿ. ಮುಹಮ್ಮದ್ ಮುಸ್ತಫ (36) ಎಂಬಿವರು ಬಂಧಿತ ಆರೋಪಿಗಳಾಗಿ ದ್ದಾರೆ. ಆರೋಪಿಗಳ ಕೈಯಿಂದ 5 ಮೊಬೈಲ್ ಫೋನ್‌ಗಳು ಹಾಗೂ ೧೩ ಲಕ್ಷರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೋತಿಲಾಲ್ ಓಸ್ವಾಲ್ ಪ್ರೈವೆಟ್ ವೆಲ್ತ್ ಮೆನೇಜ್‌ಮೆಂಟ್ ಗ್ರೂಪ್‌ನ ಪ್ರತಿನಿಧಿಗಳೆಂದು ತಿಳಿಸಿ ಉಪೇಂದ್ರ ಭಟ್ ಎಂಬವರನ್ನು ತಂಡ ಪರಿಚಯಗೊಂಡಿದೆ. ಒಂದು ವಾಟ್ಸಪ್ ಗ್ರೂಪ್‌ನಲ್ಲಿ ಸೇರಲು ಅವರಲ್ಲಿ ತಂಡ ಆಗ್ರಹಪಟ್ಟಿತ್ತು. ಗ್ರೂಪ್‌ನ ಮೂಲಕ ಹಣ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿಸಿ ಉಪೇಂದ್ರ ಭಟ್‌ರನ್ನು ತಂಡ ಬಲೆಗೆ ಹಾಕಿಕೊಂಡಿತ್ತು. ಅನಂತರ ಹೆಚ್ಚಿನ ಆದಾಯದ ಭರವಸೆಯೊಡ್ಡಿ ಹೆಚ್ಚು ಮೊತ್ತ ಠೇವಣಿಯಿರಿಸಲು ತಂಡ ತಿಳಿಸಿತ್ತು. ತಂಡವನ್ನು ನಂಬಿದ ಉಪೇಂದ್ರ ಭಟ್ ೩೩.೧ ಲಕ್ಷರೂಪಾಯಿಗಳನ್ನು ಠೇವಣಿಯಿರಿಸಿದ್ದರು. ತಿಂಗಳುಗಳು ಕಳೆದರೂ ಠೇವಣಿ ಅಥವಾ ಬಡ್ಡಿ ಲಭಿಸಿಲ್ಲ. ಅಲ್ಲದೆ ಅವರ ವಾಟ್ಸಪ್ ಗ್ರೂಪ್‌ನಿಂದ ಉಪೇಂದ್ರ ಭಟ್‌ರನ್ನು ಹೊರಹಾಕಲಾಯಿತು.ಇದರಿಂದ ವಂಚನೆಗೊಳಗಾಗಿರುವುದಾಗಿ ತಿಳಿದ ಉಪೇಂದ್ರ ಭಟ್ ಉಡುಪಿ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ತನಿಖೆಗೆ ಪ್ರತ್ಯೇಕ ತಂಡ ರೂಪೀಕರಿಸಿ ವಂಚನಾ ತಂಡವನ್ನು ಸೆರೆಹಿಡಿದಿದೆ. ಆದರೆ ತಂಡದ ಸೂತ್ರ ಧಾರನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಅಡಿಶನಲ್ ಪೊಲೀಸ್ ಸುಪರಿನ್‌ಟೆಂ ಡೆಂಟ್ ಪಿ.ಎಸ್. ಸಿದ್ದಲಿಂಗಯ್ಯ, ಪರಮೇಶ್ವರ ಹೆಗ್ಡೆ ಎಂಬಿವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳು ಸೆರೆಗೀಡಾಗಿದ್ದಾರೆ.